ಬಡವರ BPL ಕಾರ್ಡ್ ರದ್ದು ಮಾಡದಂತೆ ಆದೇಶ- ಅಧಿಕಾರಿಗಳಿಗೆ CM ಕೊಟ್ಟ ಐದು ಸೂಚನೆಗಳು ಏನು..?

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡಗಳ ಆಪರೇಷನ್ ದೊಡ್ಡ ಮಟ್ಟಿಗೆ ನಡೆಯುತ್ತಿದೆ. ಬಿಪಿಲ್​ಗಳನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಬಡಜನರು ಕಂಗಾಲಾಗಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಜನರಿಗೆ ಅಭಯದ ಹಸ್ತ ಚಾಚಿದ್ದಾರೆ. ಬಡವರಿಗೆ ಅನ್ಯಾಯ ಆಗದಂತೆ ಖಡಕ್‌ ಸೂಚನೆಯೊಂದನ್ನ ರವಾನಿಸಿದ್ದಾರೆ.

ಆಪರೇಷನ್​ ಪಡಿತರ ಚೀಟಿ.. ರಾಜ್ಯದಲ್ಲಿ ಹೆಚ್ಚಿನ ಆದಾಯವಿದ್ದವರು, ಸರ್ಕಾರಿ ನೌಕರರು ಹಾಗೂ ಅನರ್ಹರು ಪಡೆಯುತ್ತಿರುವ ಬಿಪಿಎಲ್ ಸೌಲಭ್ಯದ ಮೇಲೆ ಸರ್ಕಾರದ ಕೆಂಗಣ್ಣು ಬಿದ್ದಿದೆ. ಬಡವರಿಗಾಗಿ ಮೀಸಲಿರುವ ಯೋಜನೆಯ ಲಾಭ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಕಾರ್ಡ್​ಗಳ ಶಸ್ತ್ರಚಿಕಿತ್ಸೆಗೆ ಸರ್ಕಾರ ಸಜ್ಜಾಗಿದೆ. ರಾಜ್ಯಾದ್ಯಂತ ಅನರ್ಹರ ಬಿಪಿಎಲ್​​​​​ ಕಾರ್ಡ್​​ ರದ್ದು ಮಾಡಲಾಗ್ತಿದೆ.

ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಆದೇಶ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಆದಿಯಾಗಿ ಎಲ್ಲ ಮಾನ್ಯ ಸಚಿವರು ಬಡವರ ಬಿಪಿಎಲ್​ ಕಾರ್ಡ್​ಗಳನ್ನು ರದ್ದು ಮಾಡಲ್ಲ.. ನಮ್ಮದು ಬಡವರ ಪರ ಸರ್ಕಾರ ಅಂತ ಹೇಳುತ್ತಿದ್ದಾರೆ. ಈ ಮಧ್ಯೆ ದಿನೇ ದಿನೇ ಬಡವರನ್ನೇ ಟಾರ್ಗೆಟ್​ ಮಾಡುತ್ತಿರೋ ಆರೋಪ ಕೇಳಿಬರ್ತಿದೆ. ಪಡಿತರ ಚೀಟಿಯನ್ನೇ ನಂಬಿಕೊಂಡಿದ್ದವರ ಕಾರ್ಡ್​ ರದ್ದು ಮಾಡಲಾಗ್ತಿದೆ ಎಂಬ ವಿಚಾರ ಸದ್ದು ಮಾಡ್ತಿದೆ. ಇದಕ್ಕೆ ಕಡಿವಾಣ ಹಾಕಲು ಖುದ್ದು ಸಿಎಂ ಅಖಾಡಕ್ಕೆ ಧುಮುಕಿದ್ದಾರೆ. ಬಡವರ ಅನ್ನವನ್ನ ಕಸಿಯದಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಿಎಂ ಖಡಕ್ ಸೂಚನೆ!

ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಅಂತ ಸಿಎಂ ಎಚ್ಚರಿಕೆ

ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರ ಕಾರ್ಡ್ ರದ್ದು

ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಆದೇಶ

ಆಹಾರ ಇಲಾಖೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್‌ ಸೂಚನೆ

ಅರ್ಹ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ವಾಪಸ್ ನೀಡಿ

ಬಡ ಕುಟುಂಬಗಳ ಪಡಿತರ ಚೀಟಿ ವಿನಾಕಾರಣ ರದ್ದು ಮಾಡಿದರೆ ಕ್ರಮ

ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ. ಅರ್ಹರ ಬಿಪಿಎಲ್‌ ಕಾರ್ಡ್‌ನ ರದ್ದು ಮಾಡಲ್ಲ ಅಂತ ಸಿಎಂ ಖಡಾಖಂಡಿತವಾಗಿ ಹೇಳುತ್ತಲೇ ಇದ್ದಾರೆ. ಇದೀಗ ಆದೇಶದ ಮೂಲಕ ಬಡಜನರಿಗೆ ಸಿಎಂ ಸಿದ್ದರಾಮಯ್ಯ ಅಭಯದ ಹಸ್ತ ಚಾಚಿದ್ದಾರೆ. ಆದ್ರೂ ಕೆಲ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್‌ಗೆ ಕುತ್ತು ತರಲಾಗುತ್ತಿದೆ ಎಂಬ ಗುಲ್ಲು ಎದ್ದಿದೆ. ವಿಪಕ್ಷಗಳು ಕೂಡಾ ಇದನ್ನೇ ಅಸ್ತ್ರಮಾಡಿಕೊಂಡು ಸರ್ಕಾರವನ್ನ ಟೀಕಿಸುತ್ತಿವೆ. ಅದೇನೆ, ಇರ್ಲಿ, ಇದ್ದಂತವರ ಬಳಿ ಇರೋ ಕಾರ್ಡ್‌ನ ಕಸಿದುಕೊಳ್ಳೋದು ನ್ಯಾಯ. ಆದ್ರೆ, ಬಡವರ ಅನ್ನವನ್ನ ಕಸಿದುಕೊಂಡಿದ್ದೇ ಆದ್ರೆ ನಿಜಕ್ಕೂ ಅನ್ಯಾಯ.

Leave a Reply

Your email address will not be published. Required fields are marked *

error: Content is protected !!