ಮಣಿಪಾಲ: ಹೈ ಪಾಯಿಂಟ್ ಕನ್ಸ್‌ಟ್ರಕ್ಸ್‌ನ್ ನಾಲ್ಕನೇ ವಸತಿ ಸಮುಚ್ಚಯದ ಭೂಮಿ ಪೂಜೆ
ಮಣಿಪಾಲ: ಹೈ ಪಾಯಿಂಟ್ ಕನ್ಸ್‌ಟ್ರಕ್ಸ್‌ನ್ ಪ್ರೈ.ಲಿ ಅವರ ನಾಲ್ಕನೇ ವಸತಿ ಸಮುಚ್ಚಯ “ಹೈಪಾಯಿಂಟ್ ರೋಯಲ್” ಕಟ್ಟಡ ನಿರ್ಮಾಣದ ಭೂಮಿ ಪೂಜೆ ಸರಳಬೆಟ್ಟಿನಲ್ಲಿ ಸೋಮವಾರ ನಡೆಯಿತು.
ಮಣಿಪಾಲದ ಮಸೀದಿಯ ಮೌಲಾನ ಜಾನಾಬ್ ಸಾದಿಕ್ ಖಾಸಿಮ್ ಅವರು ಭೂಮಿ ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು. ಉದ್ಯಮಿ ಹಾಗೂ ಮಾಂಡವಿ ಬಿಲ್ಡರ್ಸ್‌ನ ಪ್ರವರ್ತಕರಾದ ಜೆರಿ ವಿನ್ಸೆಂಟ್ ಡಯಾಸ್ ಅವರು ಗುದ್ದಲಿ ಪೂಜೆ ನಡೆಸಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ಮೂರು ವಸತಿ ಸಮುಚ್ಚಯ ನಿರ್ಮಿಸಿ ಉತ್ತಮ ಬಿಲ್ಡರ್ ಎನಿಸಿಕೊಂಡ ಯೂಸುಫ್ ಅವರು ಗ್ರಾಹಕರಿಗೆ ಉತ್ತಮ ಪ್ಲಾಟ್‌ಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ. ಅರಮನೆಯ ರೀತಿ ವಿನ್ಯಾಸ ನೋಡಿ ಮನೆ ಖರೀಸುವ ಎಂದು ಆಗುತ್ತದೆ ಅಂತಹ ನೂತನ ಶೈಲಿಯ ಡಿಸೈನ್ ರಚನೆ ಆಗಿದೆ ಎಂದರು. ಸರಕಾರವು ಮನೆಕಟ್ಟುವವರಿಗೆ ನೀಡುವ ವಿವಿಧ ಪರವಾನಿಗೆಗಳ ನ್ನು ಸರಳಿಕರಣಗೊಳಿಸಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಉಜ್ವಲ್ ಡೆವಲಪರ್ಸ್‌ನ ಮಾಲಕ ಪುರುಷೋತ್ತಮ ಶೆಟ್ಟಿ, ಎ.ಜಿ ಎಸೋಸಿಯೆಟ್ಸ್‌ನ ಎಮ್.ಗೋಪಾಲ್ ಭಟ್, ನಗರ ಸಭಾ ವಿಪಕ್ಷ ನಾಯಕ ರಮೇಶ ಕಾಂಚನ್, ಮಹಾಲಕ್ಷ್ಮಿ ಬ್ಯಾಂಕಿನ ಜಿ.ಎಂ ಶರತ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಜುನೈದ್ ಅಸಾದಿ, ಜೇಸನ್ ಡಯಾಸ್, ನ್ಯಾಯವಾದಿ ನವೀನ್ ಕುಮಾರ್ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಸ್ಥೆ ಮಾಲಕರಾದ ಯೂಸುಫ್ ಫರ್ವೆಜ್ ಸ್ವಾಗತಿಸಿದರು. ಪ್ರೇಮ್ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880933887 https://www.hipointconstructions.com/projects/royal/elevation.html