ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್: ದೀಪಾವಳಿ ಆಚರಣೆ, ಸಾಧಕರಿಗೆ ಸನ್ಮಾನ
ಉಡುಪಿ: ಕಡೆಕಾರು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಕಾರ್ಯಕ್ರಮವು ಕಡೆಕಾರು ಬಿಲ್ಲವ ಸೇವಾ ಸಂಘದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಉಡುಪಿ ಜಿಲ್ಲಾ ಪಂಚಾಯತು ಅಧ್ಯಕ್ಷರಾದ ದಿನಕರ ಬಾಬು ಅವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿ ಕಡೆಕಾರು ಪರಿಸರದಲ್ಲಿ ಚೈತನ್ಯ ಫೌಂಡೇಶನಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರಾದ ಲಯನ್ಸ್ ಜಿಲ್ಲೆ 317ಸಿ ಯ ಜಿಲ್ಲಾ ಗವರ್ನರ್ ಲಯನ್ ಎನ್. ಎಮ್ ಹೆಗಡೆಯವರು ಮಾತನಾಡಿ ಪ್ರತಿಯೊಂದು ಹಬ್ಬಗಳು ಸಮಾಜಕ್ಕೆ ಒಂದೊಂದು ಸಂದೇಶವನ್ನು ನೀಡುತ್ತವೆ ಈ ಭಾರಿಯ ದೀಪಾವಳಿ ಕೊವಿಡ್-19 ಮಹಾಮಾರಿಯ ಅಂಧಕಾರದಲ್ಲಿ ಮುಳುಗಿರುವ ವಿಶ್ವಕ್ಕೆ ಬೆಳಕನ್ನು ನೀಡಲಿ, ಚೈತನ್ಯ ಫೌಂಡೇಶನ್ ಸಮಾಜದ ಸಮಸ್ಯೆಗಳಿ ಸ್ಪಂದಿಸುವ ಮೂಲಕ ಪ್ರತಿ ದಿನವೂ ಜನರ ಬದುಕಿನಲ್ಲಿ ಬೆಳಕನ್ನು ನೀಡುವ ಕೆಲಸವನ್ನು ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಎಮ್. ಆರ್. ಭಟ್, ಕೃಷಿ ಕ್ಷೇತ್ರದಲ್ಲಿ ಜೂಲಿಯನ್ ದಾಂತಿ, ಕ್ರೀಡಾ ಕ್ಷೇತ್ರದಲ್ಲಿ ಶಿಹಾನ್ ವಾಮನ್ ಪಾಲನ್ ಅವರನ್ನು ಸೇವಾ ಚೈತನ್ಯ – 2020 ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಜಿಲ್ಲಾ ಪಂಚಾಯತು ಸದಸ್ಯ ದಿವಾಕರ್ ಕುಂದರ್, ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ ನಿರುಪಮಾ ಪ್ರಸಾದ್ ಶೆಟ್ಟಿ ಶುಭಶಂಶನೆಗೈದರು. ಈ ಸಂದರ್ಭದಲ್ಲಿ ಕಾರ್ತಿಕ್ ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ಹರಿಯಪ್ಪ ಕೋಟ್ಯಾನ್, ಮಾಜಿ ಗ್ರಾಮ ಪಂಚಾಯತು ಸದಸ್ಯ ಜತಿನ್ ಕಡೆಕಾರ್, ತಾರಾನಾಥ್ ಸುವರ್ಣ, ಜೋಸೆಫ್ ರೆಬೆಲ್ಲೋ, ಚೇತನ್ ಸುವರ್ಣ, ಸ್ವರೂಪ್, ಯತೀಶ್, ಜಗನ್ನಾಥ್ ಕಡೆಕಾರ್, ಗೋಪಾಲ್ ಕೆ, ಇಂದಿರಾ ಶೆಟ್ಟಿ, ಸಾಧನಾ ಕಿಣಿ, ರವಿರಾಜ್ ನಾಯಕ್, ಕಿಶೋರ್ ಕೆ ಮೊದಲಾದವರು ಉಪಸ್ಥಿತರಿದ್ದರು.
ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿ, ವಂದಿಸಿದರು. ದಿವಾಕರ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.