ಸಹಕಾರ ವ್ಯವಸ್ಥೆ ಗ್ರಾಮೀಣ ಮಟ್ಟದಲ್ಲಿ ವಿಸ್ತರಣೆಯಾಗಬೇಕು- ಪ್ರೊ.ಕೊಕ್ಕಣೆ೯

ಮಂದಾರ್ತಿ:”ವಿಕಸಿತ ಭಾರತ”ವೆಂದರೆ ಅದೊಂದು ಪ್ರತಿ ಕುಟುಂಬದ ಬದುಕನ್ನು ಸಮೃದ್ಧಿಗೊಳಿಸುವ ಅಭಿಯಾನದ ಪರಿಕಲ್ಪನೆ. ವಿಕಸಿತ ಭಾರತದಲ್ಲಿ ಬಡತನ ನಿರುದ್ಯೋಗ ತೊಡೆದು ಹಾಕಿ ದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಸುಂದರವಾದ ಪರಿಕಲ್ಪನೆ.

ಇದನ್ನು ನಾವು ಸಾಧಿಸಬೇಕಾದರೆ ನಮ್ಮ ಮೊದಲ ಆದ್ಯತಾ ವಲಯವಾಗಿ ಸಹಕಾರ ಕ್ಷೇತ್ರವನ್ನು ಒಪ್ಪಿಕೊಂಡು ನಡೆಯಬೇಕಾದ ಅನಿವಾರ್ಯತೆ ಇದೆ. ಬರೇ ಕೈಗಾರಿಕೆ ಉದ್ಯಮವನ್ನೆ ಬೆಳೆಸುವುದರ ಮೂಲಕ ವಿಕಸಿತ ಭಾರತದಲ್ಲಿ ಹಸಿವು ನಿರುದ್ಯೋಗ ತೊಡೆದು ಹಾಕಲು ಸಾಧ್ಯವಿಲ್ಲ. ಪ್ರತಿಯೆಾಬ್ಬ ವ್ಯಕ್ತಿಯ ತಲಾ ಆದಾಯ ಹೆಚ್ಚಿಸುವಲ್ಲಿ ಈ ಸಹಕಾರ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಿಂದ ಇನ್ನಷ್ಟು ವಿಸ್ತರಣೆ ಮಾಡಬೇಕಾದ ಅಗತ್ಯತೆ ಇದೆ “ಎಂದು ಉಡುಪಿ ಎಂಜಿಎಂ.ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.

ಮಂದಾರ್ತಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಮಂದಾರ್ತಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಿ ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಇವರು ವಹಿಸಿದ್ದರು. ಉದ್ಘಾಟನೆಯನ್ನು ಎಚ್.ಧನಂಜಯ್ಯ ಶೆಟ್ಟಿ ಅನುವಂಶಿಕ ಆಡಳಿತ ಮೊಕ್ತೇಸರರು ಮಂದಾತಿ೯ ಶ್ರೀದುಗಾ೯ ಪರಮೇಶ್ವರಿ ದೇವಸ್ಥಾನ ಇವರು ನೆರವೇರಿಸಿದರು.ಕೆ.ಆರ್.ಲಾವಣ್ಯ ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ ಜಿಲ್ಲೆ ಇವರು ಸಮಾರಂಭಕ್ಕೆ ಶುಭ ಹಾರೈಸಿದರು.

ಮಂದಾತಿ೯ ಸಹಕಾರ ಸಂಸ್ಥೆಯ ನಿದೇ೯ಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಸಂಸ್ಥೆಯಲ್ಲಿ ಸಾಧನೆಗೈದವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸಂಮಾನಿಸಲಾಯಿತು.ಮಂದಾತಿ೯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಗಂಗಾಧರ ಶೆಟ್ಟಿ ಪ್ರಸ್ತಾವನೆಗೈದು ಮಾತನಾಡಿದರು.

ಅನೂಷಾ ಕೇೂಟ್ಯಾನ್ ಮುಖ್ಯ ಕಾರ್ಯ ನಿವ೯ಹಣಾಧಿಕಾರಿ ಉಡುಪಿ ಜಿಲ್ಲಾ ಸಹಕಾರ ಯುನಿಯನ್ ಇವರು ಸ್ವಾಗತಿಸಿದರು.ರಾಮಕೃಷ್ಣ ಶೆಟ್ಟಿ ಮುಖ್ಯಕಾರ್ಯನಿವ೯ಹಣಾಧಿಕಾರಿ ಮಂದಾತಿ೯ ಸೇವಾ ಸಹಕಾರಿ ಸಂಘ ಇವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!