ರಾಜ್ಯದ ಮೂವರು ಸಾಧಕರಿಗೆ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ -2024 ಪ್ರದಾನ

ಉಡುಪಿ::ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024 ಕಾರ್ಯಕ್ರಮ ಗುರುವಾರ ಉಡುಪಿಯ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ನಡೆಯಿತು..

ರಾಜ್ಯದ ಮೂವರು ಹಿರಿಯ ಸಾಹಿತಿಗಳಾದ​ ಶಿವಮೊಗ್ಗದ ಅಂಬ್ರಯ್ಯ ಮಠ (ಇತಿಹಾಸ ಸಂಶೋಧನೆ), ಚಿಕ್ಕಮಂಗಳೂರಿನ ಡಾ.ಎಚ್.ಎಸ್. ಸತ್ಯನಾರಾಯಣ.(ವಿಮಶೆ೯), ಕುಂದಾಪುರದ ಡಾ. ಉಮೇಶ್ ಪುತ್ರನ್ (ವೈದ್ಯ ಸಾಹಿತ್ಯ) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ ನ್ನು ಜಾನಪದ ವಿದ್ವಾಂಸ ಡಾ.ಗಣನಾಥ್ ಎಕ್ಕಾರ್ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಗಣಕ ಪಿತಾಮಹ ನಾಡೋಜ ಡಾ.ಕೆ.ಪಿ.ರಾವ್ ವಹಿಸಿ ಮಾತನಾಡುತ್ತಾ ಎಲ್ಲ ಪ್ರಶಸ್ತಿ ಪುರಸ್ಕೃತರು ಅಭಿನಂದನಾರ್ಹರು. ಸಾಹಿತ್ಯ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕಾಲಿಟ್ಟಿದ್ದು ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ತರಲಿದ್ದು ಇದರ ಕುರಿತು ನಾವು ಎಚ್ಚರದಿಂದ ಇರಬೇಕು ಎಂಬ ಕಿವಿ ಮಾತನ್ನು ಹೇಳಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಉಪಸ್ಥಿತರಿದ್ದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣಿೈ ಅಧ್ಯಕ್ಷರಾದ ಪ್ರೊ.ಶಂಕರ್ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಇದರ ವ್ಯವಸ್ಥಾಪಕರಾದ ಹಫೀಸ್ ರೆಹಮಾನ್ ಉಪಸ್ಥಿತರಿದ್ದರು.​ ಇದೇ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಇದರ ಜಿಲ್ಲಾ ಆಯುಕ್ತರಾಗಿ ಆಯ್ಕೆಯಾದ ಜನಾರ್ದನ ಕೊಡವೂರು ಹಾಗೆಯೇ ಅಂಚೆ ಇಲಾಖೆಯ ಶ್ರೇಷ್ಠ ಪುರಸ್ಕಾರ ಮಾರ್ಕೆಟಿಂಗ್ ಎಕ್ಸಲೆನ್ಸ್ ಪುರಸ್ಕೃತಗೊಂಡ ಪೂರ್ಣಿಮಾ ಜನಾರ್ದನ ದಂಪತಿಗಳನ್ನು ಗೌರವಿಸಲಾಯಿತು.

ಉಪಾಧ್ಯಕ್ಷರಾದ ಮಧುಸೂದನ್ ಹೇರೂರು ಸ್ವಾಗತಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆ ಮಾಡಿ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು. ಸಂಚಾಲಕಿ ಸಂಧ್ಯಾ ಶೆಣೈ ಧನ್ಯವಾದ​ವಿತ್ತರು.

Leave a Reply

Your email address will not be published. Required fields are marked *

error: Content is protected !!