ಸಂಸದರೇ ಪರ್ಕಳ ರಾ. ಹೆದ್ದಾರಿಯಲ್ಲಿ ಜನರು ಸಾಯುತ್ತಿದ್ದಾರೆ, ಸುಳ್ಳು ಹೇಳಿಕೆ ಬಿಟ್ಟು ದುರಸ್ತಿ ಮಾಡಿಸಿ- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಇದರ ಅರಿವೇ ತಮಗೆ ಇಲ್ಲದಂತಿದ್ದಾರೆ ನಮ್ಮ ಉಡುಪಿ ಲೋಕಸಭಾ ಸದಸ್ಯರು ಉಡುಪಿ ಶಾಸಕರು. ಆದರೆ ಪರ್ಕಳ ರಾಷ್ಟ್ರೀಯ ಹೆದ್ದಾರಿಯೂ ಜನಸಾಮಾನ್ಯರಿಗೆ ವಾಹನದಲ್ಲಿ ಚಲಿಸಲು ಆಗದಂತ ಪರಿಸ್ಥಿತಿಯನ್ನು ಉಂಟಾಗಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ರಿಕ್ಷಾವೇ ಅಲ್ಲಿ ಪಲ್ಟಿಯಾಗಿ ಮಕ್ಕಳು ಪಾರಾಗಿದ್ದಾರೆ. ಎರಡು ದಿನದ ಹಿಂದೆ ಗ್ರಾನೈಟ್ ಲಾರಿ ಹಿಮ್ಮುಖ ಚಲಿಸಿ ದುರಂತವೇ ಸಂಭವಿಸಿದೆ. ಆದರೆ ಇದರ ಪರಿವೆ ಇಲ್ಲದಂತೆ ವರ್ತಿಸುವ ಉಡುಪಿ ಸಂಸದರ ನಡೆಯ ಬಗ್ಗೆ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದಾರೆ.
ಸಂಸದರೇ ಪ್ರಧಾನಿ ಮೋದಿ ಅವರು ಗಂಟೆಗಟ್ಟಲೆ ಭಾಷಣ ಮಾಡಿ ಇಡೀ ದೇಶವನ್ನು ನಾವು ಅಭಿವೃದ್ಧಿ ಮಾಡುತ್ತೇವೆ ಎಂದು ಎಂದು ಹೇಳುತ್ತಾ ಜನರನ್ನು ಮೋಸಗೊಳಿಸುತ್ತಿದ್ದಾರೆ. ಇಲ್ಲಿ ಹತ್ತು ವರ್ಷಗಳಿಂದ ಒಂದೇ ಒಂದು ರಸ್ತೆ ರಾಷ್ಟ್ರೀಯ ಹೆದ್ದಾರಿ ಸರಿಯಾಗಿ ನಿರ್ಮಾಣ ಆಗಿಲ್ಲ. ಇದಕ್ಕೆ ಉತ್ತರಿಸುವವರು ಯಾರು?. ಮುಂದಿನ ಒಂದು ತಿಂಗಳ ಒಳಗೆ ಪರ್ಕಳ ರಸ್ತೆಯನ್ನು ಸರಿಯಾಗಿ ನೀವು ಮಾಡದಿದ್ದಲ್ಲಿ ಸ್ಥಳೀಯರ ಜೊತೆಗೂಡಿ ಉಡುಪಿಯ ಸಂಸದರಾದ ನಿಮ್ಮ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಈ ರಸ್ತೆಯ ದುರಸ್ತಿಯನ್ನು ಕೂಡಲೇ ಮಾಡಿಸಿ ಜನಸಾಮಾನ್ಯರ ಪ್ರಾಣವನ್ನು ಉಳಿಸುವ ಜವಾಬ್ದಾರಿ ನಿಮ್ಮದು. ನಿಮಗೆ ಆ ಕೆಲಸವನ್ನು ಮಾಡಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಇದರ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಇವರ ತಿಳಿಸಿರುತ್ತಾರೆ.