ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ – ಯುವಕನ ರಕ್ಷಿಸಿದ ಸ್ಥಳೀಯರು
ಮಂಗಳೂರು: ತನ್ನ ಪುಟ್ಟ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಂದೆಯನ್ನು ಮಗುವಿನ ಸಮೇತ ಸ್ಥಳೀಯ ಯುವಕರು ರಕ್ಷಿಸಿದ ಘಟನೆ ನಗರದ ಹೊರ ವಲಯದ ಗುರುಪುರದಲ್ಲಿ ನಡೆದಿದೆ.
ಕೈಕಂಬ ನಿವಾಸಿ ಸಂದೀಪ್ ಪೂಜಾರಿ ಅತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ.
ಪತ್ನಿಯೊಂದಿಗಿನ ವಿರಸದಿಂದ ನೊಂದು ಸಂದೀಪ್ ತನ್ನ ಎರಡು ವರ್ಷದ ಮಗುವಿನೊಂದಿಗೆ ಗುರುಪುರದ ಫಲ್ಗುಣಿ ಸೇತುವೆ ಮೇಲಿನಿಂದ ನದಿಗೆ ಜಿಗಿಯಲು ಯತ್ನಿಸಿದ್ದರು. ಸ್ಥಳೀಯರು ಪರಿಪರಿಯಾಗಿ ಮನವೊಲಿಸಿದರೂ ಆತ ಕೇಳಲು ಸಿದ್ಧನಿರಲಿಲ್ಲ. ಕೊನೆಗೂ ಯುವಕರ ಗುಂಪು ಆತನನ್ನು ಹಿಡಿದು ರಕ್ಷಿಸಿದ್ದಾರೆ.