ಮಣಿಪಾಲದಲ್ಲಿ “ಗಿರಿಜಾ ಸರ್ಜಿಕಲ್” ನೂತನ ಶಾಖೆ ಉದ್ಘಾಟನೆ
ಮಣಿಪಾಲ: ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಣಿಪಾಲದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸರ್ಜಿಕಲ್ ಸಾಮಗ್ರಿಗಳು ಸಿಗುತ್ತಿರುವುದು ಅಭಿನಂದನೆಯ ಎಂದು ಡಾ.ಟಿಎಂಎ ಪೈ ಫೌಂಡೇಶನ್ ಮಣಿಪಾಲ ಅಧ್ಯಕ್ಷರಾದ ಟಿ. ಅಶೋಕ್ ಪೈ ಹೇಳಿದರು.
ಅವರು ಮಣಿಪಾಲದ ಗಿರಿಜಾ ಸರ್ಜಿಕಲ್ ನೂತನ ಶಾಖೆಯನ್ನು ಇಂದು ಉದ್ಘಾಟಿಸಿ ಮಾತನಾಡಿದರು. ಮಣಿಪಾಲ ಶಿಕ್ಷಣ ಕೇಂದ್ರದ ಹಬ್ ಆಗಲು ಈ ರೀತಿಯ ಸಂಸ್ಥೆಗಳು ಕೂಡ ಕೊಡುಗೆ ನೀಡಿವೆ ಎಂದರು. ವೇದಿಕೆಯಲ್ಲಿ ಉಜ್ವಲ ಡೆವಲಪರ್ಸ್‌ನ ಪುರುಷೋತ್ತಮ ಪಿ ಶೆಟ್ಟಿ, ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ,
ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಉಡುಪಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಎಸೋಸಿಯೇಷನ್ ಅಧ್ಯಕ್ಷ ಎ ರಮೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು . ಸಂಸ್ಥೆಯ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ ಸ್ವಾಗತಿಸಿದರು, ಸುರೇಖಾ ಶೆಟ್ಟಿ, ಹರೀಶ್ ಕುಮಾರ್ ಮುಂತಾದವರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು.