ಪರಶುರಾಮ ಮೂರ್ತಿ ನಿರ್ಮಾಣ ಪ್ರಕರಣ- ಶಿಲ್ಪಿ ಕೃಷ್ಣ ನಾಯ್ಕ್ ಪುದುಚೇರಿಯಲ್ಲಿ ಬಂಧನ
ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮರ ಮೂರ್ತಿ ನಿರ್ಮಾಣ ಪ್ರಕರಣದಲ್ಲಿ ಅದರ ಶಿಲ್ಪಿ ಕೃಷ್ಣ ನಾಯ್ಕ್‌ರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಪುದುಚೇರಿಯ ಮಾಹೆ ಎಂಬಲ್ಲಿ ಕಾರ್ಕಳ ಪೊಲೀಸರು ಬಂಧಸಿದ್ದಾರೆ.
ಕೃಷ್ಣ ನಾಯ್ಕ್ ರವರು ಕಾರ್ಕಳ ಪೊಲೀಸರು ತನ್ನ ಮೇಲೆ ಹಾಕಿದ ಕೇಸ್‌ಗೆ ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕಾರ ಮಾಡಿತ್ತು.
ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು ಈ ಮೂರ್ತಿ ವಿಚಾರದಲ್ಲಿ ಇನ್ನಷ್ಟು ಮಾಹಿತಿ ಲಭ್ಯ ಆಗಬೇಕಿದೆ.