ಮಹಿಳೆಗೆ ಚುಡಾಯಿಸಿದ ಆರೋಪಿ ಬ್ರಹ್ಮಾವರ ಠಾಣೆಯಲ್ಲಿ ಮೃತ್ಯು?
ಬ್ರಹ್ಮಾವರ, ನ.10(ಉಡುಪಿ ಟೈಮ್ಸ್ ವರದಿ): ಮಹಿಳೆಗೆ ವಿಚಿತ್ರವಾಗಿ ಸನ್ನೆ ಮಾಡಿದ ಆರೋಪದ ಮೇಲೆ ಠಾಣೆಗೆ ಕರೆದುಕೊಂಡು ಬಂದ ವ್ಯಕ್ತಿಯು ಬ್ರಹ್ಮಾವರ ಠಾಣೆಯಲ್ಲಿ ಮೃತಪಟ್ಟ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಮೃತ ವ್ಯಕ್ತಿ ಕೇರಳದ ಕೊಲ್ಲಂ ನಿವಾಸಿ ಬೀಜುಮೋಹನ್ (42) ಎಂದು ತಿಳಿದುಬಂದಿದೆ. ಇತ ಕಳೆದ ಮೂರು ದಿನಗಳ ಹಿಂದೆಷ್ಟೆ ಹಂಗಾರಕಟ್ಟೆಯ ಫಿಶ್ ಫ್ಯಾಕ್ಟರಿಗೆ ಉದ್ಯೋಗಕ್ಕೆ ಬಂದಿದ್ದ ಎನ್ನಲಾಗಿದೆ.
ಬೀಜು ಮೋಹನ್ ಕಳೆದ ರಾತ್ರಿ ಸೂರಲ್‌ಬೆಟ್ಟಿನ ತಾನು ಉಳಿದುಕೊಳ್ಳುತ್ತಿದ್ದ ಮನೆಗೆ ಹೋಗುತ್ತಿದ್ದ ಸಂದರ್ಭ ಮಗುವಿಗೆ ಊಟ ಮಾಡಿಸುತ್ತಿದ್ದ ಮಹಿಳೆಗೆ ಅಸಭ್ಯವಾಗಿ ಕರೆದಿದ್ದ, ಇದರಿಂದ ಹೆದರಿದ ಮಹಿಳೆ ಬೊಬ್ಬ ಹಾಕಿದ್ದಾಗ ಸ್ಥಳೀಯರು ಒಟ್ಟಾಗಿ ಆತನನ್ನು ಹಿಡಿದಿದ್ದರು. ಬಳಿಕ ರಾತ್ರಿ ಸುಮಾರು ಎಂಟು ಗಂಟೆಗೆ ಸ್ಥಳೀಯರು ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಬೀಜು ಮೋಹನ್‌ನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.
ರಾತ್ರಿ ಸೆಲ್‌ನಲ್ಲಿದ್ದ ಬೀಜು ಮೋಹನ್ ಶೌಚಾಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲೆ ಕುಸಿದು ಬಿದ್ದ ಎನ್ನಲಾಗಿದೆ. ರಾತ್ರಿ 3.30 ಸುಮಾರಿಗೆ ಆತನನ್ನು ನೋಡಿದ ಪೊಲೀಸರು ತಕ್ಷಣ ಬ್ರಹ್ಮಾವರ ತಾಲೂಕು ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಪರೀಕ್ಷಿಸಿದ ವೈದ್ಯರು ಮೃತಟ್ಟಿರುವುದಾಗಿ ಘೋಷಿಸಿದ್ದಾರೆ.
ಮೃತ ಬೀಜುಮೋಹನ್‌ಗೆ ಪತ್ನಿ, ಇಬ್ಬರು ಮಕ್ಕಳು ಇದ್ದು ಬ್ರಹ್ಮಾವರಕ್ಕೆ ಆಗಮಿಸುತ್ತಿದ್ದಾರೆ.