ಅಜೆಕಾರು: ನಾಡಕೋವಿಯೊಂದಿಗೆ ಬೇಟೆಗಾಗಿ ಅರಣ್ಯ ಪ್ರವೇಶ- ಮೂವರ ಬಂಧನ
ಅಜೆಕಾರು, ನ.10: ಬೇಟೆಗಾಗಿ ಅಕ್ರಮವಾಗಿ ನಾಡಕೋವಿಯೊಂದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯದ ಒಳಗಡೆ ಪ್ರವೇಶಿಸಿದ್ದ ಆರೋಪದಲ್ಲಿ ಬಂಧಿತರಾದ ಮೂವರ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳನ್ನು ವಸಂತ, ಜಯ, ರಾಕೇಶ್ ಎಂದು ಗುರುತಿಸ ಲಾಗಿದೆ. ಈ ಸಂದರ್ಭದಲ್ಲಿ ಸಂತೋಷ್ ಎಂಬಾತ ಓಡಿ ಹೊಗಿ ತಲೆಮರೆಸಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಡಾರು ವನ್ಯಜೀವಿ ಘಟಕದ ಉಪ ವಲಯ ಅರಣ್ಯ ಅಧಿಕಾರಿ ಅಭಿಲಾಷ್ ನೇತೃತ್ವದ ತಂಡ ಅ.31ರಂದು ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಬೇಟೆಯಾಡಲು ಅಕ್ರಮವಾಗಿ ನಾಡಕೋವಿಯನ್ನು ಇಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯದ ಒಳಗಡೆ ಪ್ರವೇಶಿಸಿದ್ದ ಮೂವರನ್ನು ಬಂಧಿಸಿದ್ದರು.
ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗಿ ರುವುದರಿಂದ ಕಾರ್ಕಳ ಹೆಚ್ಚುವರಿ ಸಿವಿಲ್ ಜಡ್ಜ್ ಜೆ.ಎಂ.ಎಫ್.ಸಿ ನ್ಯಾಯಾ ಲಯದ ಅನುಮತಿ ಪಡೆದು, ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತು ಗಳೊಂದಿಗೆ ಉಪ ವಲಯ ಅರಣ್ಯ ಅಧಿಕಾರಿ ಅಭಿಲಾಷ್ ದೂರು ನೀಡಿದ್ದಾರೆ.