ಉಡುಪಿ: ‘ನನ್ನ ನಾಡು ನನ್ನ ಹಾಡು’ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ: ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182 ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವರ ವತಿಯಿಂದ ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಸಹಯೋಗದೊಂದಿಗೆ ಆಯೋಜಿಸಿದ್ದ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ಶನಿವಾರ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಸಿಎ ದೇವಾನಂದ ಅವರು, ರೋಟರಿ ಹಾಗೂ ಲಯನ್ಸ್ ಜೊತೆಗೂಡಿ ಪ್ರತಿಭೆಗಳನ್ನು ಅನ್ವೇಷಿಸುವ ಕೆಲಸ ಮಾಡಿದೆ. ಇಂತಹ ಸಂಗೀತ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳ ಪರಿಚಯವಾಗುತ್ತದೆ. ಉತ್ತಮ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಅವರನ್ನು ಬೆಳೆಸುವ ಕೆಲಸ ಆಗಬೇಕು ಎಂದರು. ಮಣಿಪಾಲ ಶ್ರೀದುರ್ಗಾ ಮ್ಯೂಸಿಕ್ ಮೀಟ್ ಮುಖ್ಯಸ್ಥೆ ತೇಜಸ್ವಿನಿ ಅನಿಲ್ ರಾಜ್ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೈದ್ಯ ಡಾ. ಅಭಯ್ ಟಿ ಕಾಮತ್ ದಂಪತಿಗಳನ್ನು ಸನ್ಮಾನಿಸಲಾಯಿತು. ರೋಟರಿಯ ಬಿ.ಎಂ. ಭಟ್, ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸ್ವಪ್ನ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ರೋಟರಿಯ ಜಿಲ್ಲಾ ಕಾರ್ಯದರ್ಶಿ ಐರೋಡಿ ರಾಮದೇವ ಕಾರಂತ್, ಲಯನ್ಸ್ ಜಿಲ್ಲಾ ಚೀಫ್ ಕೋರ್ಡಿನೇಟರ್ ಹರಿಪ್ರಸಾದ್ ರೈ, ಸಂಗೀತ ಕಲಾವಿದರ ಸಂಘದ ಅಧ್ಯಕ್ಷೆ ಮುಕ್ತ ಶ್ರೀನಿವಾಸ್ ಭಟ್, ಅಂಬಲಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ತಾರನಾಥ ಆರ್. ಸುವರ್ಣ, ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಪೂಜಾರಿ, ಕಲ್ಯಾಣಪುರ ಲಯನ್ಸ್ ಕ್ಲಬ್ ಅಧ್ಯಕ್ಷ ರೋನಾಲ್ಡ್ ಸ್ವುಹಾರಿಸ್, ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಆರೂರು ಶ್ರೀಧರ ಶೆಟ್ಟಿ, ಸಂತೆಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಜುಲ್ಯಾಸ್ ಲೂವಿಸ್, ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ಬ್ಯಾಪಿಸ್ಟ್ ಡಯಾಸ್, ಉಡುಪಿ ಚೇತನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಉಡುಪಿ ಮಿಡ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಪ್ರಭಾಕರ ಶೆಟ್ಟಿ, ಅನಿಲ್ ರಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ನಂದಕಿಶೋರ್ ಕೆಮ್ಮಣ್ಣುಸ್ವಾಗತಿಸಿದರು .ಅಂಬಲಪಾಡಿ ರೋಟರಿ ಸಂಸ್ಥೆಯ ಕಲ್ಚರಲ್ ಕೋರ್ಡಿನೇಟರ್ ನಾಗಭೂಷಣ್ ಶೇಟ್, ರೋಟರಿಯ ಗಣೇಶ್ ಕುಮಾರ್ ಮಟ್ಟು, ಲಯನ್ಸ್ ರಜತ್ ಹೆಗ್ಡೆ ಸಹಕರಿಸಿದರು.