ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ- ಎಸ್.ಐ.ಟಿ. ತನಿಖೆಗೆ ಸಿಪಿಐಎಂ ಒತ್ತಾಯ

ಉಡುಪಿ: ಮಹಾಲಕ್ಷ್ಮೀ ಕೊ ಆಪರೇಟಿವ್ ಬ್ಯಾಂಕ್ ನ ಮಲ್ಪೆ ಶಾಖೆಯಲ್ಲಿ ಸಾಲ ನೀಡುವಿಕೆಯಲ್ಲಿ ಅವ್ಯವಹಾರ ನಡೆದಿದೆಯೆಂದು ಪತ್ರಿಕೆಗಳು ವರದಿ ಮಾಡಿದ್ದು ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಿ ವಿಶೇಷ ತನಿಖಾ ತಂಡದ(SIT) ಮೂಲಕ ತನಿಖೆ ನಡೆಸಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

2023ರ ಮಾರ್ಚ್ ತಿಂಗಳಲ್ಲಿ ಮಲ್ಪೆ ಶಾಖೆಯ ಮ್ಯಾನೇಜರ್ ಆಗಿದ್ದ ಸುಬ್ಬಣ್ಣನವರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅವರ ಅಣ್ಣ ಸುರೇಶ್ ಅವರು ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್ ಸುವರ್ಣ ಅವರ ಮೇಲೆ ದೂರು ನೀಡಿದ್ದರು. ಆ ಸಂದರ್ಭದಲ್ಲೇ ತನಿಖೆ ನಡೆಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿತ್ತು. ಆಗ ಆಡಳಿತದಲ್ಲಿದ್ದ ಬಿಜೆಪಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಮಾತ್ರವಲ್ಲ ಆಪಾದನೆಗೆ ಒಳಗಾದ ವ್ಯಕ್ತಿಗೇ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿತ್ತು.

ಈಗ ಸಾಲ ಪಡೆದವರು, ಕಡಿಮೆ ಸಾಲ ಪಡೆದು ಹೆಚ್ಚು ಸಾಲ ಪಡೆದಿದ್ದೀರಿ ಎಂದು ನೋಟೀಸು ಪಡೆದವರು – ನೂರಾರು ಜನರು ಬ್ಯಾಂಕಿಗೆ ದೂರು ನೀಡಿರುತ್ತಾರೆ. ಈ ಕುರಿತು ಆಣೆಪ್ರಮಾಣ ಕೈಗೊಳ್ಳುವುದರ ಬದಲಾಗಿ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆಂದು ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!