ಉಡುಪಿ: ನ.10 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ”ಭೀಮಶಕ್ತಿ” ಸಮಾವೇಶ

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಇದೇ ನವೆಂಬರ್ 10 ರಂದು ಉಡುಪಿಯಲ್ಲಿ ”ಭೀಮಶಕ್ತಿ” ಸಮಾವೇಶ ನಡೆಯಲಿದೆ.

ಸಂಘಟನೆಯ ರಾಜ್ಯ ಸಂಚಾಲಕ ಅಣ್ಣಾ ಮಾವಳ್ಳಿ ಶಂಕರ್ ಈ ಸಮಾವೇಶ ಉದ್ಘಾಟಿಸಲಿದ್ದು,ಉಡುಪಿ ಜಿಲ್ಲಾಧಿಕಾರಿ ಡಾ.ಕೆವಿದ್ಯಾಕುಮಾರಿ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ, ರಾಜ್ಯ ಸಂಚಾಲಕ ಗ.ನ.ಅಶ್ವಥ್, ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ರಾಜ್ಯ ಸಮಿತಿ ಸದಸ್ಯ ಮಲ್ಲೆಚ್ ಅಂಬುಗ, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ B.K.ವಸಂತ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲೆಯ ಹಿರಿಯ ದಸಂಸ ನಾಯಕರಾದ ಕರುಣಾಕರ ಮಾಸ್ತರ್ ಮಲ್ಪೆ,ವಿಠ್ಠಲ್ ದಾಸ್ ಬನ್ನಂಜೆ, ಎಸ್.ಎಸ್. ಪ್ರಸಾದ್, ಹೂವಪ್ಪ ಮಾಸ್ತರ್ ಕಾರ್ಕಳ, ಡಾ.ಪ್ರೇಮ ದಾಸ್ ಸಮಾವೇಷದಲ್ಲಿ ಉಪಸ್ಥಿತರಿರುವರು.

ಮಹಿಳಾ ಒಕ್ಕೂಟದ ವಸಂತಿ ಶಿವಾನಂದ್, ಗೀತಾ ಸುರೇಶ್ ಕುಮಾರ್ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ಇರಲಿದ್ದು, ಡಾ.ಗಣೇಶ್ ಗಂಗೊಳ್ಳಿ,ಶಂಕರ್ ದಾಸ್ ಚೆಂಡ್ಕಳ, ರವಿ ಬನ್ನಾಡಿ ಕ್ರಾಂತಿಗೀತೆ ಪ್ರಸ್ತುತಪಡಿಸಲಿದ್ದಾರೆ.

ಜಿಲ್ಲೆಯ ಪ್ರಗತಿಪರರು,ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಯ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ಗಂಟೆ 10ರಿಂದ ಆರಂಭವಾಗುವ ಈ ಸಮಾವೇಶದಲ್ಲಿ ಉಡುಪಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕೂಡ ನಡೆಯಲಿದೆ ಎಂದು ಸಂಘಟನೆಯು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!