ನ.10: ವಿಶ್ವ ಮಧು ಮೇಹ ದಿನದ ಪ್ರಯುಕ್ತ ಬ್ರಹತ್ ಮಧುಮೇಹ ಜಾಗೃತಿ ಜಾಥಾ
ಉಡುಪಿ: ಆದರ್ಶ ಆಸ್ಪತ್ರೆ, ಉಡುಪಿ ಆದರ್ಶ ಚಾರಿಟೇಬಲ್ ಟ್ರಸ್ಟ್ ಉಡುಪಿ, ಆದರ್ಶ ಸಮೂಹ ಸಂಸ್ಥೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಉಡುಪಿ ,ಜಿಲ್ಲಾ ಸರ್ವೇಕ್ಷಣಾ ಘಟಕ (ಎನ್.ಸಿ.ಡಿ ವಿಭಾಗ ) ಐ.ಎಂ.ಎ ಉಡುಪಿ,ಎ.ಪಿ.ಐ ಉಡುಪಿ ಮತ್ತು ಲಯನ್ಸ್ ಜಿಲ್ಲಾ 317ಸಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಪ್ರಯುಕ್ತ ಬ್ರಹತ್ ಮಧುಮೇಹ (ಡಯಾಬಿಟೀಸ್) ಜಾಗೃತಿ ಜಾಥಾ ವನ್ನು ನ.10ರಂದು ಬೆಳಗ್ಗೆ 8:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಜಾಥಾವನ್ನು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಪ್ರಾರಂಭಿಸಿ ತದನಂತರ ಮೆರವಣಿಗೆಯಲ್ಲಿ ಸಾಗಿ ಜೋಡುಕಟ್ಟೆ, ಡಯಾನ ಸರ್ಕಲ್, ಕೆ. ಎಂ. ಮಾರ್ಗ, ಸಿಟಿ ಬಸ್ ಸ್ಟಾಂಡ್ನಲ್ಲಿ ತಿರುವು ಪಡೆದು ಆದರ್ಶ ಆಸ್ಪತ್ರೆಯಲ್ಲಿ ಸಮಾಪನಗೊಳ್ಳುವುದು. ಈ ಜಾಥಾದಲ್ಲಿ ಶಾಸಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು.ಭಾಗವಹಿಸುತ್ತಿದ್ದು, ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ಡಯಬಿಟಿಸ್ ಕಾಯಿಲೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಹಾಗೂ ಜಾಗೃತಿ ಮೂಡಿಸುವ ಪ್ರಾತ್ಯಕ್ಷಿತೆ ಹಾಗೂ ಫಲಕಗಳ ಪ್ರದರ್ಶನ,ಕಿರುನಾಟಕಗಳು,ವೇಷ ಭೂಷಣಗಳ ಪ್ರದರ್ಶನವಿರುವುದು, ಅಷ್ಟೇ ಅಲ್ಲದೇ ಉಚಿತವಾಗಿ ರಕ್ತದ ಸಕ್ಕರೆ ಅಂಶದ ಪರೀಕ್ಷೆಯನ್ನು ನಿಗದಿತ ಸ್ಥಳದಲ್ಲಿ ಮಾಡಲಾಗುವುದು. ಈ ಜಾಥಾದಲ್ಲಿ ಸರಿಸುಮಾರು 2000 ಜನ ಭಾಗವಹಿಸುತ್ತಿದ್ದು ಸಾರ್ವಜನಿಕರು ಈ ಜಾಥಾದಲ್ಲಿ ಭಾಗವಹಿಸಿ ಡಯಬಿಟಿಸ್ ಖಾಹಿಲೆಯ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳಬೇಕೆಂದು ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ|ಜಿ. ಎಸ್. ಚಂದ್ರಶೇಖರ್ ತಿಳಿಸಿರುತ್ತಾರೆ