ಆಗುಂಬೆ ಘಾಟಿ – ವಾಹನ ಸಂಚಾರಕ್ಕೆ ಮುಕ್ತ

ಉಡುಪಿ, ನ.13(ಉಡುಪಿ ಟೈಮ್ಸ್ ವರದಿ) ರಾಷ್ಟ್ರೀಯ ಹೆದ್ದಾರಿ ಹೆದ್ದಾರಿ 169 (ಎ) ತೀರ್ಥಹಳ್ಳಿ-ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯ ಮಾರ್ಗದಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಭಾರಿ ಹಾಗೂ ಸತತ ಮಳೆಯಾಗುವ ದಿನಗಳಂದು 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ, ಪರ್ಯಾಯ ಮಾರ್ಗವಾದ ಉಡುಪಿ-ಬ್ರಹ್ಮಾವರ-ಬಾರ್ಕೂರು-ಶಂಕರನಾರಾಯಣ-ಸಿದ್ಧಾಪುರ-ಹೊಸಗ0ಡಿ-ಹುಲಿಕಲ್ ಘಾಟಿ-ಹೊಸನಗರ-ತೀರ್ಥಹಳ್ಳಿ ಹಾಗೂ ಉಡುಪಿ-ಕಾರ್ಕಳ-ಬಜಗೋಳಿ-ಎಸ್.ಕೆ ಬಾರ್ಡರ್-ಕೆರೆಕಟ್ಟೆ-ಶೃಂಗೇರಿ- ಶಿವಮೊಗ್ಗ ಮೂಲಕ ಸಂಚರಿಸುವAತೆ ಹಾಗೂ ಭಾರಿ ಮಳೆ ಇಲ್ಲದಿರುವ ದಿನಗಳಲ್ಲಿ ಎಲ್ಲಾ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!