ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿರುವುದಕ್ಕೆ ದಿನಕರ್ ಹೇರೂರು ಸಾಕ್ಷಿ- ಅಮೃತ್ ಶೆಣೈ
ಉಡುಪಿ: ಕಾಂಗ್ರೆಸ್ ಪಕ್ಷವು ಯಾವತ್ತು ಕಾರ್ಯಕರ್ತರನ್ನು ಮರೆಯದೆ ಕಾರ್ಯಕರ್ತರ ಬೆಂಗಾವಲಾಗಿ ಇದೆ ಎಂಬುದಕ್ಕೆ ಸಾಕ್ಷಿ ದಿನಕರ್ ಹೇರೂರು ಸಾಕ್ಷಿ ಎಂದು ಅಮೃತ್ ಶೆಣೈ ಹೇಳಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಉಡುಪಿ ಬ್ಲಾಕ್ ಕಾಂಗ್ರೆಸ್ ಇದರ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದರು 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಇವರನ್ನು ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ನಾಯಕರು ಎಂದು ಗುರುತಿಸಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಶ್ಲಾಘನೀಯ
ಸುರೇಶ್ ಶೆಟ್ಟಿ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪಂಚಾಯತ್ ರಾಜ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ದಿನಕರ್ ಹೇರೂರವರನ್ನು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಿನಕರ್ ಹೆರೂರ್ ಇವರು ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಡುಪಿಯ ಜನತೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದಾಗಿ ತಿಳಿಸಿ, ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪ್ರಪ್ರಥಮವಾಗಿ ಸ್ಪಂದಿಸಿ ಫಲಪ್ರೇಕ್ಷೆ ಇಲ್ಲದೆ ತಾನು ದುಡಿಯುತ್ತೇನೆ ಎಂಬ ವಾಗ್ದಾನವನ್ನು ತಿಳಿಸಿದರು.
ಈ ಸಭೆಯಲ್ಲಿ ಪಂಚಾಯತ್ ಸಂಘಟನೆ ಪದಾಧಿಕಾರಿಗಳಾದ ರಮಾ ಕುಕ್ಕಿಕಟ್ಟೆ, ಸದಾನಂದ ಕಿನ್ನಿಮುಲ್ಕಿ, ಉದಯ ಪೂಜಾರಿ ಪಂದುಬೆಟ್ಟು, ಯೋಗೀಶ್ ಮೂಡಬೆಟ್ಟು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಹೇಶ್ ಮೂಡಬೆಟ್ಟು, ಅನ್ವರ್ ಕುಕ್ಕಿಕಟ್ಟೆ, ಸಾಯಿರಾಜ್ ಕೋಟ್ಯಾನ್, ಸುಕನ್ಯಾ ಪೂಜಾರಿ, ಕಮಲ್ ಮಲ್ಪೆ, ಸುರೇಂದ್ರ ಆಚಾರ್ಯ ಕಾಡುಬೆಟ್ಟು, ಸುರೇಂದ್ರ ನಿಟ್ಟೂರು,ಉದಯ ಆಚಾರ್ಯ, ಸೂರ್ಯ ಬ್ರಹ್ಮಾವರ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು. ಶೇಖರ್ ಶೆಟ್ಟಿ ಸ್ವಾಗತಿಸಿ, ಅನಿಲ್ ಕುಮಾರ್ ಹೆರ್ಗ ವಂದಿಸಿದರೆ,ಸುರೇಶ್ ತೆಂಕನಿಡಿಯೂರು ಕಾರ್ಯಕ್ರಮ ನಿರೂಪಿಸಿದರು.