ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೆಶಕರ ಸ್ಥಾನಕ್ಕೆ ನಾಮಪತ್ರ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ನಿರ್ದೆಶಕರ ಸ್ಥಾನಕ್ಕೆ ತೋನ್ಸೆ ಕೆಮ್ಮಣ್ಣು ಗ್ರಾಮ ಪಂಚಾಯತ್ ಕಾರ್ಯದರ್ಶಿ ದಿನಕರ ಮತ್ತು ಉದ್ಯಾವರ ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯಾದ ಶಿವರಾಜು.ಎಂ ಇಂದು ಉಡುಪಿಯ ಜಿಲ್ಲಾ ಸರಕಾರಿ ನೌಕರರ ಭವನದ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಮಂಜುನಾಥ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಉಮಾಶಂಕರ ಹೇರಿಕುದ್ರು, ರಮೇಶ್ ಹೆಚ್ ಆರ್, ನಾಗೇಂದ್ರ ಹಾಗೂ ಕಾರ್ಯದರ್ಶಿ ಸಂಘದ ಪದಾಧಿಕಾರಿಗಳಾದ ಗಣೇಶ್ ಎಮ್, ದಿನೇಶ್ ಶೆಟ್ಟಿ , ಗುರುರಾಜ್, ಲೆಕ್ಕ ಸಹಾಯಕರ ಸಂಘದ ಪದಾಧಿಕಾರಿಗಳಾದ ಹರೀಶ್, ವಾರಿಜ ಬಿ, ಕಲ್ಲಪ್ಪ ಖಾವಸ್ತ ಮತ್ತಿತರರು ಉಪಸ್ಥಿತರಿದ್ದು ಬೆಂಬಲ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!