ಮಂಗಳೂರು: ಅಮೆಜಾನ್ ಕಂಪನಿಗೆ ವಂಚನೆ- ಇಬ್ಬರ ಸೆರೆ
ಮಂಗಳೂರು: ದೇಶಾದ್ಯಂತ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ವಂಚಿಸಿದ ಆರೋಪಿಗಳಿಬ್ಬ ರನ್ನು ಬಂಧಿಸುವ ಮೂಲಕ ಮಂಗಳೂರು ಪೊಲೀಸರು ಬಹು ರಾಜ್ಯ, ಬಹುಕೋಟಿ ವಂಚನೆಯ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತ ಆರೋಪಿಗಳಾದ ರಾಜಸ್ಥಾನದ ರಾಜ್ ಕುಮಾರ್ ಮೀನಾ (23) ಮತ್ತು ಸುಭಾಷ್ ಗುರ್ಜರ್ (27) ಅವರು ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ಬಂಧನ ಮಹತ್ವದ ಕಾರ್ಯಾಚರಣೆ ಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ಈ ಕುರಿತು ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಗರಣದಲ್ಲಿ 11. 45 ಲಕ್ಷ ರೂಪಾಯಿ ಮೌಲ್ಯದ ಆರ್ಡರ್‌ಗಳು ನಕಲಿ ಎಂದು ಗುರುತಿಸಲಾಗಿದೆ.
ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಾಲ್ಪನಿಕ ವಿಳಾಸ ನೀಡಿ ಎರಡು ಅಧಿಕ ಮೌಲ್ಯದ ಕ್ಯಾಮೆರಾ ಮತ್ತಿತರ ವಸ್ತುಗಳಿಗೆ ಆರ್ಡರ್ ನೀಡಲು ಅಮಿತ್ ಎಂಬ ಹೆಸರನ್ನು ಆರೋಪಿಗಳು ಬಳಸುತ್ತಿದ್ದರು. ಡೆಲಿವರಿ ಆದ ಮೇಲೆ, ಮೀನಾ ಅವರು ವಸ್ತುಗಳನ್ನು ಸಂಗ್ರಹಿಸಿ ಒಟಿಪಿ ನೀಡಿದರೆ ಗುರ್ಜರ್ ಡೆಲಿವರಿ ಸಿಬ್ಬಂದಿಯನ್ನು ತಬ್ಬಿಬ್ಬುಗೊಳಿ ಸಿದರು. ನಂತರ ಅವರು ಸೋನಿ ಕ್ಯಾಮೆರಾ ಬಾಕ್ಸ್‌ಗಳಲ್ಲಿನ ಟ್ರ್ಯಾಕಿಂಗ್ ಲೇಬಲ್ಗಳನ್ನು ತಪ್ಪಾದ OTPಯಿಂದ ಡೆಲಿವರಿ ವಿಳಂಬ ಖಚಿತವಾದ ಅದೇ ರೀತಿಯ ಕಡಿಮೆ ಬೆಲೆಯ ವಸ್ತುಗಳ ಬಾಕ್ಸ್ ಮೇಲೆ ಹಚ್ಚಿದ್ದರು.