ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಹರಡಿದ “ಸುಲ್ತಾನ್’ಪುರ”ಎಂಬ ಸುಳ್ಳು ಸುದ್ದಿ- ಜಿಲ್ಲಾಧಿಕಾರಿ ಸ್ಪಷ್ಟನೆ
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಿಯ ಬಿಡಲಾಗಿದೆ. ಇದೀಗ ಸುಳ್ಳು ಸುದ್ದಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯ ಶಿವಳ್ಳಿ ಗ್ರಾಮವನ್ನು ಸುಲ್ತಾನ್‌ಪುರ ಎಂದು ಹೆಸರಿಸಲಾಗಿದೆ (ದಿಶಾಂಕ್‌ನಿಂದ ಸ್ಕ್ರೀನ್ ಶಾಟ್, GOK ಅಪ್ಲಿಕೇಶನ್ 1 ನವೆಂಬರ್ 2024 ರಂದು ರಾತ್ರಿ 9 ಗಂಟೆಗೆ ವೀಕ್ಷಿಸಲಾಗಿದೆ). ಎಲ್ಲಾ ಉಡುಪಿ ನಾಗರಿಕರು ವಕ್ಫ್ ಪ್ರವೇಶಕ್ಕಾಗಿ ನಿಮ್ಮ RTC ಅನ್ನು ಪರಿಶೀಲಿಸಿ..”ಎಂಬ ಸುಳ್ಳು ಸುದ್ದಿ ವಾಟ್ಸಪ್’ನಲ್ಲಿ ಹರಿದಾಡಿತ್ತು.
ಈ ಸುದ್ದಿಗೆ ಸ್ಪಷ್ಟನೆ ನೀಡಿರು ಜಿಲ್ಲಾಧಿಕಾರಿ ಯವರು, “Dishank app ನಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ಮತ್ತು 85 ರಲ್ಲಿ SULTANAPURA ಎಂದು ದಾಖಲಾಗಿರುತ್ತದೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಲಾಗಿದೆ. ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120& 85 ರ ಗ್ರಾಮನಕಾಶೆಯನ್ನು ಲಗತ್ತಿಸಲಾಗಿದೆ. ಸಾರ್ವಜನಿಕರು ಸಹ ಸದರಿ ಗ್ರಾಮದ ಪೂರ್ಣ ಗ್ರಾಮ ನಕಾಶೆಯನ್ನು https://www. landrecords. karnataka.gov.in/service3/ Default.aspx ನಲ್ಲಿ Download ಮಾಡಬಹುದಾಗಿದೆ. ಗ್ರಾಮ ನಕಾಶೆಯಲ್ಲಿ SULTANAPUR ಎಂದು ದಾಖಲಾಗಿರುದಿಲ್ಲ.
ಕಂದಾಯ/ಭೂಮಾಪನ ಇಲಾಖೆ ದಾಖಲೆಗಳಲ್ಲಿ Sultanpur ಎಂದು ಇರುವುದಿಲ್ಲ, ಸರ್ವೇ ನಂಬರು 120ರ RTC ಯಲ್ಲೂ ಈ ರೀತಿಯ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.” ಎಂದು ಜಿಲ್ಲಾಧಿಕಾರಿಯವರ ಅಧಿಕೃತ ಫೆಸ್ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಈ ಸುಳ್ಳು ಸುದ್ದಿಯಿಂದ ಹಲವು ಗೊಂದಲಗಳು ಸೃಷ್ಟಿಯಾಗಿತ್ತು. ಇದೀಗ ಜಿಲ್ಲಾಧಿಕಾರಿವರ ಸ್ಪಷ್ಟನೆ ಗೊಂದಲಕ್ಕೆ ತೆರೆ ಎಳೆದಿದೆ. ಅದರೊಂದಿಗೆ ಸುಳ್ಳು ಸುದ್ದಿ ಹರಡಿದವರ ಮೇಲೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.