ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಂಪನ್ನ

ಉಡುಪಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಹಾಗೂ ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 29 ಮತ್ತು 30ರಂದು ನಡೆದ ಎರಡು ದಿನಗಳ ಕ್ರೀಡಾಕೂಟವು ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ಪುತ್ತಿಗೆ ಮಠದ ದಿವಾನರಾದ ರಮಣಾಚಾರ್ಯರು ಮಾತನಾಡಿ,ಜಿಲ್ಲೆಯು ಧಾರ್ಮಿಕ, ಶೈಕ್ಷಣಿಕ, ವ್ಯಾಪಾರ, ವ್ಯವಹಾರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಡುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಭವ್ಯ ಭವಿಷ್ಯವಿದೆ ಎಂದರು. ಪುತ್ತಿಗೆ ಮಠದ ಪರ್ಯಾಯದ ಅವಧಿಯಲ್ಲಿ ನಡೆಯುತ್ತಿರುವ ಸ್ವಾಮೀಜಿಯವರ ಮಹತ್ವಾಕಾಂಕ್ಷೆಯ ಕೋಟಿ ಗೀತಾ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ವರನ್ನು ಆಹ್ವಾನಿಸಿದರು.ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ದಿನೇಶ್ ಎಂ. ಕೊಡವೂರ್ ಮಾತನಾಡಿ ಕ್ರೀಡಾಕೂಟವು  ಯಶಸ್ವಿಯಾಗಿ ಸಂಪನ್ನಗೊಳ್ಳಲಿ ಸಹಕರಿಸಿದ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘವನ್ನು, ಸಂಘ-ಸಂಸ್ಥೆಗಳನ್ನು ಹಾಗೂ ಎಲ್ಲಾ  ಆಡಳಿತ ವರ್ಗವನ್ನು ಪ್ರಶಂಸಿಸಿ ವಂದಿಸಿದರು. 

ಕ್ರೀಡಾಕೂಟದ ಓವರ್ ಆಲ್ ಛಾಂಪಿಯನ್ ಶಿಪ್ ಪ್ರಶಸ್ತಿಯನ್ನು ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ.ಪೂ.ಕಾಲೇಜು ತನ್ನದಾಗಿಸಿಕೊಂಡಿದ್ದಲ್ಲದೆ ಅಲ್ಲಿನ ವಿದ್ಯಾರ್ಥಿ ಪ್ರಣಯ್ ಶೆಟ್ಟಿ ಬಾಲಕ ವಿಭಾಗದಲ್ಲಿ ಹಾಗೂ ಎಂ.ಜಿ.ಎಂ ಪ.ಪೂ. ಕಾಲೇಜಿನ ಕು.ರ‍್ನಿಕಾ ವರ್ಷಾ ಡಿ'ಸೋಜ  ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಛಾಂಪಿಯನ್ ಶಿಪ್ ಪಡೆದುಕೊಂಡರು.

ತಂಡ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ಸ.ಪ. ಪೂರ್ವಕಾಲೇಜು ಉಡುಪಿ ಹಾಗೂ ಬಾಲಕಿಯರ ವಿಭಾಗದಲ್ಲಿ ಬಾಲಕಿಯರ ಸ.ಪ.ಪೂ.ಕಾಲೇಜು ಉಡುಪಿ ಪಡೆದುಕೊಂಡರು. ಇದೇ ಸಂದರ್ಭ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರ್‌ರವರನ್ನು  ಸಂಘಟಕರ ಪರವಾಗಿ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಉಪನಿರ್ದೇಶಕರಾದ ಮಾರುತಿ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಗೌರವಾಧ್ಯಕ್ಷ ಡಾ. ಪ್ರವೀಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಕಾರ್ಯದರ್ಶಿ ದಯಾನಂದ್ ಪೈ, ಖಜಾಂಜಿ ಸಂದೀಪ್ ಕುಮಾರ್, ಕ್ರೀಡಾ ಸಂಯೋಜಕ ಐವನ್ ದೋನತ್ ಸುವಾರೀಸ್, ದೈ.ಶಿ.ಉ.ಸಂಘದ ಗೌರವಾಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ,ಅಧ್ಯಕ್ಷ ಸತೀಶ್ ಹೆಗ್ಡೆ ಶಾನಾಡಿ ಉಪಸ್ಥಿತರಿದ್ದರು. ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಶಾಲಾ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ದಿನೇಶ್. ಕುಮಾರ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!