69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಬೆಂಗಳೂರು: ರಾಜ್ಯ ಸರ್ಕಾರ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳ ಒಟ್ಟು 69 ಗಣ್ಯರ ಹೆಸರನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಘೋಷಣೆ ಮಾಡಿದರು.
ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 69 ಗಣ್ಯರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ನವೆಂಬರ್ 1ರಂದು ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ…
ಚಲನಚಿತ್ರ-ಕಿರುತೆರೆ
- ಹೇಮಾ ಚೌಧರಿ
- ಎಂಎಸ್ ನರಸಿಂಹಮೂರ್ತಿ
ಜಾನಪದ ಕ್ಷೇತ್ರ
- ಇಮಾಮಸಾಬ ಎಂ. ವಲ್ಲೆಪನವರ
- ಅಶ್ವ ರಾಮಣ್ಣ
- ಕುಮಾರಯ್ಯ
- ವೀರಭದ್ರಯ್ಯ
- ನರಸಿಂಹಲು (ಅಂಧ ಕಲಾವಿದ)
- ಬಸವರಾಜ ಸಂಗಪ್ಪ ಹಾರಿವಾಳ
- ಎಸ್.ಜಿ. ಲಕ್ಷ್ಮೀದೇವಮ್ಮ
- ಪಿಚ್ಚಳ್ಳಿ ಶ್ರೀನಿವಾಸ
- ಲೋಕಯ್ಯ ಶೇರ (ಭೂತಾರಾಧನೆ)
ಸಂಗೀತ ಕ್ಷೇತ್ರ
- ಪಿ ರಾಜಗೋಪಾಲ
- ಎಎನ್ ಸದಾಶಿವಪ್ಪ
ನೃತ್ಯ: ವಿದುಷಿ ಲಲಿತಾ ರಾವ್,
ಆಡಳಿ ಕ್ಷೇತ್ರ: ಎಸ್ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)
ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ, ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ
ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್.
ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ್, ಹೆಚ್ಆರ್ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು,
ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್ ಪರಿಸರ: ಆಲ್ಮಿತ್ರಾ ಪಟೇಲ್
ಕೃಷಿ: ಶಿವನಾಪುರ ರಮೇಶ, ಪುಟ್ಟೀರಮ್ಮ
ಮಾಧ್ಯಮ: ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ
ಸಾಹಿತ್ಯ ಕ್ಷೇತ್ರ: ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್
ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)