ಬನ್ನಂಜೆ ಮೃತ ವ್ಯಕ್ತಿಯ ವರದಿ ನೆಗೆಟಿವ್

ಉಡುಪಿ: ಬನ್ನಂಜೆ ನಿವಾಸಿಯೊರ್ವ ಶೀತ, ಕೆಮ್ಮು, ಜ್ವರದಿಂದ ಮೃತಪಟ್ಟ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಜಿಲ್ಲಾ ಆರೋಗ್ಯಧಿಕಾರಿ ಸುಧೀರ್ ಚಂದ್ರ ಸೂಡ ಸ್ಪಷ್ಟಪಡಿಸಿದ್ದಾರೆ.


ನಗರದ ಬನ್ನಂಜೆಯ ಶರತ್ ಕುಮಾರ್ (44) ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದರು,ಇಂದು ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು.


ವ್ಯಕ್ತಿಯ ಸಾವಿನಲ್ಲಿ ಸಂಶಯವಿದ್ದ ಕಾರಣ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು, ಸಂಜೆ ಇದರ ವರದಿ ಬಂದಿದ್ದು ವ್ಯಕ್ತಿಯಲ್ಲಿ ಯಾವುದೇ ಕೊರೋನಾ ಸೋಂಕಿನ ಲಕ್ಷಣಗಳಿರಲಿಲ್ಲವೆಂದು ಆರೋಗ್ಯಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!