ಹೋಂ ಡಾಕ್ಟರ್ ಫೌಂಡೇಶನ್: ದಶಮಾನೋತ್ಸವ ಮತ್ತು ದೀಪಾವಳಿ ಆಚರಣೆ

ಉಡುಪಿ: ಹೋಂ ಡಾಕ್ಟರ್ ಫೌಂಡೇಶನ್ ಇದರ ದಶಮಾನೋತ್ಸವ ಸಂಭ್ರಮ ಮತ್ತು ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮವು ಕೊಳಲಗಿರಿ ಸಂತೆ ಮೈದಾನದಲ್ಲಿ ಅ. 29ರಂದು ನಡೆಯಿತು.

ಈ ಸಂದರ್ಭದಲ್ಲಿ ಖ್ಯಾತ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲ ಪಾಡಿ ಅವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ಸೇವೆ ಮಾಡುವಾಗ ಅವಮಾನ ಮತ್ತು ಪ್ರಶಂಸೆ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ನಮ್ಮಲ್ಲಿರಬೇಕು. ಇಂದು ಪ್ರತಿಯೊಂದು ಕೆಲಸ ಸರ್ಕಾರ ಮಾಡಬೇಕೆನ್ನುವ ಮನೋಭಾವನೆ ಬಿಟ್ಟು ಸಮಾಜಕ್ಕಾಗಿ ಏನಾದರೂ ಉತ್ತಮ ಕೆಲಸ ಮಾಡುವ ಮನಸ್ಸು ಮಾಡಬೇಕಾಗಿದೆ. ಯುವ ಜನಾಂಗ ಇಂದು ಹಲವಾರು ಕಾರಣದಿಂದ ವಿವಿಧ ರೀತಿಯ ಸಮಸ್ಯೆಯನ್ನು ಎದುರಿಸುವ ಸ್ಥಿತಿಯಲ್ಲಿ ಅವರನ್ನು ತಿದ್ದಿ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಮಾಡುವ ಜವಾಬ್ದಾರಿ ನಮ್ಮದಾಗಬೇಕು.

ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಹೋಂ ಡಾಕ್ಟರ್ ಫೌಂಡೇಶನ್ ಇದರ ಪ್ರವತ೯ಕರಾದ ಡಾ. ಶಶಿಕಿರಣ್ ಶೆಟ್ಟಿ ವಹಿಸಿ ಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಲವಾರು ಜನ ಅಸಹಾಯಕರಿಗೆ ದಿನಸಿ ಸಾಮಗ್ರಿ ಮತ್ತು ವಿವಿಧ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ಸುಮಾರು 3.50 ಲಕ್ಷ ರೂ. ಸಹಾಯಧನ ವಿತರಿಸಲಾಯಿತು

ಈ ಸಂದರ್ಭದಲ್ಲಿ ಡಾ.ಶಶಿಕಿರಣ್ ಶೆಟ್ಟಿ ಬರೆದ ಬದುಕು ಬದಲಿಸುವ ಕಥೆಗಳು ಭಾಗ-3 ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು ವೇದಿಕೆಯಲ್ಲಿ ಸಂಸ್ಥೆಯ ಡಾ. ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಸುಜಯ ಶೆಟ್ಟಿ, ಉದಯ ನಾಯ್ಕ್, ರಾಘವೇಂದ್ರ ಕವಾ೯ಲು, ರೋಶನ್ ಡಿಸೋಜ,ಉಪಸ್ಥಿತರಿದ್ದರು.
ಕಾಯ೯ಕ್ರಮದಲ್ಲಿ ಸಂಸ್ಥೆಯ ಫಲಾನುಭವಿಗಳಾದ ಸುಮತಿ ಅಜ್ಜಿ, ಮಧುಸೂಧನ ಭಟ್, ಮತ್ತಿತರು ಉಪಸ್ಥಿತರಿದ್ದರು. ಅಸ್ತಿಮಜ್ಜೆ ಚಿಕಿತ್ಸೆಗೆ ಒಳಗಾದ
ದಿನೇಶ್ ರವರ ಚಿಕಿತ್ಸೆ ಮಾಡಿದ ಕೆ.ಎಂ.ಸಿ ಮಣಿಪಾಲದ ವೈದ್ಯರಾದ ಡಾ.ವಾಸುದೇವ ಭಟ್ ರವರನ್ನು ಸನ್ಮಾನಿಸಲಾಯಿತು. ಉಚಿತ ಅಂಬುಲೆನ್ಸ್ ಸೇವೆಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ಬಾಲ ಸಂಗೀತ ಕಲಾವಿದೆ ಗೆ ನೆರವಾಗಲು ಅಂಡ್ರಾಯಿಡ್ ಮೊಬೈಲ್ ನೀಡಲಾಯಿತು.
ಶಾರದಾ ಅಂಧ ಕಲಾವಿದ ತಂಡದಿಂದ ಸಂಗೀತ ಕಾಯ೯ಕ್ರಮ ನಡೆಯಿತು.ಸಂದೀಪ್ ಶೆಟ್ಟಿ ಮತ್ತು ಯೋಗಿಶ್ ಗಾಣಿಗ ಕಾಯ೯ಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!