ಅ.30 ರಂದು ಉಡುಪಿ ಕಾಂಗ್ರೆಸ್ ಹಠಾವೋ – ದಲಿತ್ ಬಚಾವೋ
ಉಡುಪಿ: ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಸರಕಾರದ ಗಮನಕ್ಕೆ ತರುವಲ್ಲಿ ವಿಫಲವಾದ ಜಿಲ್ಲಾ ಕಾಂಗ್ರೇಸ್ ಪಕ್ಷದ ನಾಯಕರ ವಿರುದ್ದ ಉಡುಪಿ ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ ಎಂದು ಅ.30ರಂದು ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ತಿಳಿಸಿದ್ದಾರೆ.
ಬೆಳಿಗ್ಗೆ 10.30ಕ್ಕೆ ಉಡುಪಿಯ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ಎದುರು ನಡೆಯುವ ಈ ಪ್ರತಿಭಟನೆಯಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ನೀಡಬೇಕಾದ ಪೋಲೀಸ್ ಅಧಿಕಾರಿಗಳೇ ಪ್ರಕರಣಕ್ಕೆ ‘ಬಿ’ ರಿಪೋಟ್ ಹಾಕಿ ದಲಿತ ಸಮಾಜಕ್ಕೆ ವಂಚನೆ ಮಾಡುತ್ತಿದ್ದು ಅಂತಹ ಅಧಿಕಾರಿಗಳ ಕಾನೂನು ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ.
ಜಿಲ್ಲೆಯ ಪೊಲೀಸ್ ಇಲಾಖೆಗಳಲ್ಲಿ ಹಾಗೂ ಕಂದಾಯ ಇಲಾಖೆಯಲ್ಲಿ ದಲಿತರ ಕುಂದುಕೊರತೆ ಸಭೆಗಳನ್ನು ನಿರ್ಲಕ್ಷಿಸುತ್ತಿರುವ ಜಿಲ್ಲಾಡಳಿತದ ವಿದುದ್ಧ ಧ್ವನಿ ಎತ್ತುತ್ತಿಲ್ಲ.ಜಿಲ್ಲೆಯ ಅನೇಕ ಇಖಾಖೆಯಲ್ಲಿ ವರ್ಷನೂಗಟ್ಟಲೆ ದಲಿತ ವಿರೋಧಿ ಅಧಿಕಾರಿಗಳು, ನೌಕರರು ಇದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ದಲಿತರ ಮೂಲಭೂತ ಸೌಲಭ್ಯಗಳನ್ನು ಸಕಾಲದಲ್ಲಿ ಪೂರೈಸುತ್ತಿಲ್ಲ.
ಖಾಸಾಗಿ ಶಾಲಾ-ಕಾಲೇಜ್ ಮತ್ತು ಸರಕಾರ ಅಂಗಸಂಸ್ಥೆಗಳಲ್ಲಿ ಮೀಸಲಾತಿ ಹುದ್ದೆಯನ್ನು ವಂಚಿಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಡಿ.ಸಿ ಮನ್ನ ಭೂಮಿಯನ್ನು ದಲಿತರಿಗೆ ಹಂಚಿಕೆಯಾಗಿಲ್ಲ. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ,ಪುರಸಭೆ,ನಗರ ಸಭೆಗಳ್ಲಿ ದಲಿತರ ಶೇ. 22.75ರ ನಿಧಿ ದುರುಪಯೋಗ ಮತ್ತು ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ.
ವಾಣಿಜ್ಯ ಬ್ಯಾಂಕುಗಳಲ್ಲಿ ದಲಿತ ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗ ನಡೆಸುವಲ್ಲಿ ಸಾಲ-ಸೌಲಭ್ಯ ನೀಡುತ್ತಿಲ್ಲ. ಪರಿಶಿಷ್ಠಜಾತಿ/ಪಂಗಡದ ಕುಟುಂಬಕ್ಕೆ ಮನೆ ನಿರ್ಮಿಸಲು ವಿವಿಧ ಇಲಾಖೆಯಿಂದ ಸಹಾಯಧನ ವದಗಿಸುತ್ತಿಲ್ಲ.ಪೌರಕಾರ್ಮಿಕರನ್ನು ಎಲ್ಲಾ ಕಡೆ ಶೋಷಣೆ ನಡೆಸುತ್ತಿದ್ದಾರೆ.ಸರ್ಕಾರಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ.ವೈಧ್ಯಕೀಯ ಚಿಕಿತ್ಸೆಗೆ ಸಕಾಲದಲ್ಲಿ ವಿವಿಧ ಯೋಜನೆಗಳಿಂದ ಹಣದ ಮೊತ್ತ ಆಸ್ಪತ್ರೆಗೆ ಬಿಡುಗಡೆಯಾಗುವುದಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿಧ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ.
ಪರಿಶಿಷ್ಟಜಾತಿ ಮತ್ತು ಪಂಗಡದ ಮನೆಗಳಿಗೆ ವೈಯುಕ್ತಿಕ ನೀರಿನ ಸಂಪರ್ಕದ ವೆಚ್ಚವನ್ನು ನಗರ ಸ್ಥಳೀಯ ಸಂಸ್ಥೆಯ ಶೇ.22.75ರ ನಿಧಿಯಿಂದ ಭರಿಸಬೇಕೆಂಬ ಆದೇಶವನ್ನು ಪಾಲಿಸುತ್ತಿಲ್ಲ.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳಿಂದ ಅಪ್ತ ವಸೂಳಿಗೆ ಬರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದರೂ, ಜಿಲ್ಲೆಯ ದಲಿತರ ಅಭಿವೃದ್ದಿ ಬಗ್ಗೆ,ಸಮಸ್ಯೆ ಬಗ್ಗೆ ಸಕಾಲದಲ್ಲಿ ಸ್ಪಂದಿಸದಿದ್ದರೂ ಉಡುಪಿ ಜಿಲ್ಲಾ ಕಾಂಗ್ರೇಸ್ ನಾಯಕರು ಮೌನ ವಹಿಸಿತ್ತಿರುವುದು ಮತದಾರರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ಎಂದು ಹರೀಶ್ ಸಾಲ್ಯಾನ್ ಆರೋಪಿಸಿದ್ದಾರೆ.
ಜಿಲ್ಲೆಯ ದಲಿತರ ನೂರಾರು ಸಮಸ್ಯಗೆ, ನೋವುಗಳಿಗೆ ಸ್ಪಂದಿಸುವಂತೆ ಉಡುಪಿ ಕಾಂಗ್ರೆಸ್ ಪಕ್ಷದನಾಯಕರಿಗೆ ಸಾಕಷ್ಟು ಮನವಿಮಾಡಿದರೂ ಯಾವುದೇ ರೀತಿಯಲ್ಲಿ ಸಹಕರಿಸದೆ ದಿವ್ಯ ನಿರ್ಲಕ್ಷವನ್ನು ಮಾಡುತ್ತಿದ್ದಾರೆ.
ಹಾಗಾಗಿ ಉಡುಪಿ ಜಿಲ್ಲೆಯ ಕಾಂಗ್ರೆಸ್ ತೊಲಗಿಸಿ-ಬಡವರನ್ನು ಉಳಿಸಿ ಎಂದು ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದಿರುವ ಹರೀಶ್ ಸಾಲ್ಯಾನ್ ಉಡುಪಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಬಂಡವಾಳಶಾಹಿ ವರ್ಗದವರ ಸದಾ ರಕ್ಷಣೆ ಮಾಡುತ್ತಿದ್ದಾರೆಯೆ ಹೊರತು ಉತ್ತಮ ಸಮಾಜಕ್ಕಾಗಿ ಜನರ ಜೀವನ ಪದ್ಧತಿಯನ್ನು ಬದಲಾಯಿಸಲು ಪ್ರಯತ್ನಿಸಲೇ ಇಲ್ಲ. ಕೇವಲ ಈ ಪಕ್ಷದ ನಾಯಕರು ತಮ್ಮ ಮೋಜಿಮಸ್ತಿಯಲ್ಲಿ, ಅಧಿಕಾರದ ದಾಹದಲ್ಲಿ ಮೆರೆಯುತ್ತಿದ್ದಾರೆ. ದಲಿತರ ನೋವನ್ನು ಕೇಳುವ ಸ್ಥಿತಿಯಲ್ಲಿಲ್ಲದ ಇಲ್ಲಿನ ಕಾಂಗ್ರೆಸ್ ನಾಯಕರ ವಾದನೇ ಮನುವಾದ, ಬಂಡವಾಳ ಶಾಹಿವಾದ,ಅಸಮಾನತೆಯ ವಾದ ಎಂಬುದು ಸಾಬೀತಾಗಿದೆ. ದಲಿತರ ಉದ್ಧಾರದ ಮಾತು ಕೇವಲ ಬುರುಡೆ ಮಾತಾಗಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯ ಮತ್ತು ರಾಷ್ಟೀಯ ಕಾಂಗ್ರೆಸ್ ಪಕ್ಷದ ಗಮನ ಸೆಳೆಯಲು “ಉಡುಪಿ ಕಾಂಗ್ರೇಸ್ ಹಠಾವೋ-ದಲಿತ್ ಬಚಾವೋ” ಎಂದು ಪ್ರತಿಭಟನೆ ಆಯೋಜಿಸಿರುವುದಾಗಿ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ತಿಳಿಸಿದ್ದಾರೆ.