ಕುಂದಾಪುರ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ: ಲಂಚ ಪಡೆಯುವಾಗ‌ ಸಿಕ್ಕಿ ಬಿದ್ದ ಅಧಿಕಾರಿ

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಭೂಪರಿವರ್ತೆನೆಗೆ (ಕನ್ವರ್ಶನ್) ಕೇಳಿದ 12 ಸಾವಿರ ಲಂಚದ ಹಣದಲ್ಲಿ 5 ಸಾವಿರ ರೂ.ಪಡೆಯುವಾಗ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದ ಘಟ‌ನೆ ಗುರುವಾರ ನಡೆದಿದೆ.

ಕುಂದಾಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು, ಪ್ರಸ್ತುತ ಕಂದಾಯ ನಿರೀಕ್ಷಕರಾಗಿರುವ ಭರತ್ ವಿ. ಶೆಟ್ಟಿ 5ಸಾವಿರ ಲಂಚ ಪಡೆಯುವಾಗ ಎಸಿಬಿ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.

ವ್ಯಕ್ತಿಯೊಬ್ಬರ ಬಳಿ ಭೂಪರಿವರ್ತೆನೆಗೆ 12 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಈ ಬಗ್ಗೆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು. ಅದರಂತೆಯೇ ಎಸಿಬಿ ಕಾರ್ಯಾಚರಣೆ ನಡೆಸಿದ್ದು ಇಂದು ವ್ಯಕ್ತಿ ಬಳಿ 5 ಸಾವಿರ ಲಂಚ ಪಡೆಯುವಾಗ ಬಂಧಿಸಿದ್ದಾರೆ. ಸದ್ಯ ಭರತ್ ಶೆಟ್ಟಿ ವಿಚಾರಣೆ ನಡೆಸುತ್ತಿದ್ದು ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಎಸಿಬಿ ಉಡುಪಿ ಡಿವೈಎಸ್ಪಿ ಮಂಜುನಾಥ ಕವರಿ, ಇನ್ಸ್‌ಪೆಕ್ಟರ್ ಸತೀಶ್ ಬಿ.ಎಸ್., ಚಂದ್ರಕಲಾ, ಎಸಿಬಿ ಸಿಬ್ಬಂದಿಗಳಾದ ಯತೀನ್ ಕುಮಾರ್, ಪ್ರಸನ್ನ, ರವೀಂದ್ರ ಗಾಣಿಗ, ಅಬ್ದುಲ್ ಜಲಲ್, ರಾಘವೇಂದ್ರ ಹೊಸ್ಕೋಟೆ,ಸೂರಜ್, ಅಬ್ದುಲ್ ಲತೀಪ್, ಪ್ರತೀಮಾ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು

1 thought on “ಕುಂದಾಪುರ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ: ಲಂಚ ಪಡೆಯುವಾಗ‌ ಸಿಕ್ಕಿ ಬಿದ್ದ ಅಧಿಕಾರಿ

  1. These shameless creatures should be put behind bars without a chance for bail. Also they should be cut off from all Local and government services, pensions and job oppertunities. These people get decent salary from government, yearly salary hike and bonus, above that, they take bribe from people who cant even afford decent roof, food and education for their family. Shameless

Leave a Reply

Your email address will not be published. Required fields are marked *

error: Content is protected !!