ಹಕ್ಕು ಪತ್ರ ಕೊಡದ ದಲಿತರ ಮನೆಗಳಿಗೆ ದ.ಸಂ.ಸ. ನಿಯೋಗ ಭೇಟಿ
ಕಾಪು: ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿಯಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದ ನಾಲ್ಕೈದು ದಲಿತ ಕುಟುಂಬಗಳಿಗೆ ಹಕ್ಕು ಪತ್ರ ವಂಚಿತ ಮತ್ತು ವಿಧ್ಯುತ್ ಸಂಪರ್ಕಕ್ಕೆ ನಿರಪೇಕ್ಷಣಾ ಪತ್ರ ನಿರಾಕರಿಸಿದ ಬಗ್ಗೆ ದೂರು ಬಂದ ಕಾರಣ ಇಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಮನವಿ ಸ್ವೀಕರಿಸಿ ಪರೀಶೀಲನೆ ನಡೆಸಿತು.
ಮೂಡುಬೆಳ್ಳೆ ಗ್ರಾಮ ಶಾಖೆಯ ಪದಾಧಿಕಾರಿಗಳೊಂದಿ ಗೆ ಕಟ್ಟಿಂಗೇರಿಗೆ ಭೇಟಿಕೊಟ್ಟ ಸಮಿತಿಯು ಸ್ಥಳೀಯರು ಕುಡಿಯುವ ನೀರಿಗೆ ತಡೆಯೊಡ್ಡುತ್ತಿರುವುದು , ಮತ್ತು ಶಾಲೆಗೆ ಹೋಗುವ ವಿಧ್ಯಾರ್ಥಿಗಳಿರುವ ಮನೆಗಳಿಗೆ ವಿದ್ಯುತ್ ದೀಪದ ಸಂಪರ್ಕಕ್ಕೆ ತಡೆಯೊಡ್ಡಿರುವ ಬಗ್ಗೆ ಕೂಲಂಕಷ ಮಾಹಿತಿ ಪಡೆದುಕೊಂಡಿತು.
ಈ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಸಮಿತಿಯು ಖುದ್ದಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಅವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದಾಗಿ ತೀರ್ಮಾನಿಸಲಾಯಿತು.
ಇಂದು ಸ್ಥಳಕ್ಕೆ ಭೇಟಿಕೊಟ್ಟ ನಿಯೋಗದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಕುಮಾರ್ ಕೋಟ, ಶ್ಯಾಮಸುಂದರ ತೆಕ್ಕಟ್ಟೆ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ರಾಜೇಂದ್ರ ಮಾಸ್ಟರ್ ಬೆಳ್ಳೆ, ಕಾಪು ತಾಲೂಕು ಸಂಚಾಲಕರಾದ ವಿಠಲ ಉಚ್ಚಿಲ, ತಾಲೂಕು ಸಂಘಟನಾ ಸಂಚಾಲಕರಾದ ಶಿವರಾಮ ಕಾಪು, ಮೂಡುಬೆಳ್ಳೆ ಗ್ರಾಮ ಶಾಖೆ ಸಂಚಾಲಕರಾದ ರಾಘವ ಮೂಡುಬೆಳ್ಳೆ, ಸಂಘಟನಾ ಸಂಚಾಲಕರಾದ ಕ್ರಷ್ಣ ಬೆಳ್ಳೆ ಕರುಣಾಕರ ಬೆಳ್ಳೆ, ರಮೇಶ ಬೆಳ್ಳೆ ಮೊದಲಾದವರು ಉಪಸ್ಥಿತರಿದ್ದರು.