ಸತ್ಯನಾಥ ಸ್ಟೋರ್ಸ್​: ದೀಪಾವಳಿ ಹಾಗೂ ಕ್ರಿಸ್ಮಸ್​ ಹಬ್ಬದ ಕೊಡುಗೆ

Oplus_131072

ಉಡುಪಿ: ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪ ಮತ್ತು ಕೊಕ್ಕರ್ಣೆಯಲ್ಲಿ ವಸ್ತ್ರ ವೈವಿಧ್ಯಗಳ ಮಾರಾಟ ಮತ್ತು ಸೇವೆಗೆ ಹೆಸರುವಾಸಿಯಾದ, 75 ವರ್ಷಗಳಿಂದ ಗ್ರಾಹಕರ ಮನೆಮಾತಾಗಿರುವ ಸತ್ಯನಾಥ ಸ್ಟೋರ್ಸ್​ನಲ್ಲಿ ದೀಪಾವಳಿ ಹಾಗೂ ಕ್ರಿಸ್ಮಸ್​ ಹಬ್ಬದ ಪ್ರಯುಕ್ತ ಡಿಸೆಂಬರ್ 31ರ ವರೆಗೆ ಅದೃಷ್ಟಶಾಲಿ ಗ್ರಾಹಕರಿಗೆ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ.
ಪ್ರತಿ 500 ರೂ. ಖರೀದಿಗೆ ಕೂಪನ್​. ಅದೃಷ್ಟಶಾಲಿ ವಿಜೇತರಿಗೆ ಪ್ರಥಮ ದ್ವಿಚಕ್ರವಾಹನ, ದ್ವೀತಿಯ ಐಫೋನ್, ತೃತೀಯ ಲ್ಯಾಪ್​ ಟಾಪ್​ ಹಾಗೂ 75 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತಿದೆ.

ವೈವಿಧ್ಯಮಯ ವಸ್ತ್ರಗಳ ಅಪಾರ ಸಂಗ್ರಹ
ವೈವಿಧ್ಯಮಯ ವಸ್ತ್ರಗಳ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಕಾಂಚೀವರಂ, ಆರಣಿ, ಧರ್ಮಾವರಂ, ಸತ್ಯಮಂಗಳ, ಹಿಂದೂಪುರ, ಸೇಲಂ, ಬನಾರಸ್​, ಕೋಲ್ಕತಾ, ಸೂರತ್​, ಮಧುಬನಿ, ಚಾಪಾ, ಮೀನಾ, ಖಾತಾ, ಕೋಟಾ, ಪೋಚಂಪಲ್ಲಿ, ಇಕ್ಕತ್​, ಪೈತನಿ, ನಾರಾಯಣಪೇಟ್​ ಮುಂತಾದ ರೇಷ್ಮೆ ಸೀರೆಗಳ ಬೃಹತ್​ ಸಂಗ್ರಹವಿದೆ. ಮಹಿಳೆಯರ ಕುರ್ತಿಸ್​, ಬ್ರೈಡಲ್ ಲೆಹೆಂಗಾ, ಚೂಡಿದಾರ, ಗೌನ್ಸ್​, ಡ್ರೆಸ್​ ಮೆಟೀರಿಯಲ್ಸ್​, ಪುರುಷರ ಶೇರ್ವಾನಿ, ಕುರ್ತಾ, ಬ್ರಾಂಡೆಡ್​ ಶರ್ಟ್​, ಟಿ-ಶರ್ಟ್​, ಜೀನ್ಸ್​ ಪ್ಯಾಂಟ್​, ಮಕ್ಕಳ ವೆಸ್ಟರ್ನ್​ ಡ್ರೆಸ್​, ಫ್ರಾಕ್​, ಚೂಡಿದಾರ, ಗೌನ್ಸ್​, ಹ್ಯಾಂಡ್​ ಲೂಮ್ಸ್​, ಬೆಡ್​ ಶೀಟ್​, ಬ್ಲಾಂಕೆಟ್​, ಧೋತೀಸ್​, ಶಲ್ಯ ಇತ್ಯಾದಿ ಬಟ್ಟೆಗಳ ಬೃಹತ್​ ಸಂಗ್ರಹವಿದೆ. ಬಟ್ಟೆಗಳ ಆಯ್ಕೆಗೆ ಗ್ರಾಹಕರಿಗೆ ವಿಪುಲ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!