ಉಡುಪಿ ಸಹಕಾರ ಭಾರತಿ: ಜಿಲ್ಲಾಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ಆಯ್ಕೆ

Oplus_131072

ಉಡುಪಿ: ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಹಕಾರಿ ಸಂಘಟನೆಯಾದ ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ರವರು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಸುಧೀಶ್ ನಾಯಕ್, ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಉಪಾಧ್ಯಕ್ಷರಾಗಿ ದಿನಪಾಲ್ ಶೆಟ್ಟಿ, ಹರೀಶ್ ಕಲ್ಯ, ಅಶೋಕ್ ಪ್ರಭು ಬ್ರಹ್ಮಾವರ, ಭೋಜ ಪೂಜಾರಿ ಹೆಬ್ರಿ, ಆಶಾ ಹೆಗ್ಡೆ ಬ್ರಹ್ಮಾವರ ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಕುತ್ಯಾರು, ಮಹಿಳಾ ಪ್ರಮುಖರಾಗಿ ವಿಜೇತಾ ಪೈ ಅಜೆಕಾರು, ಸಹ ಪ್ರಮುಖರಾಗಿ ಸ್ಮಿತಾ ಶೆಟ್ಟಿ ನಿಯುಕ್ತಿಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್, ರೋಹಿತ್, ಸುದರ್ಶನ್. ರಾಜ್ಯ ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ಮೋಹನದಾಸ ನಾಯಕ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ, ನಿಕಟ ಪೂರ್ವ ಅಧ್ಯಕ್ಷ ಬೋಳಾ ಸದಾಶಿವ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಸಹಕಾರಿ, ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಸತೀಶ್ಚಂದ್ರ ಎಸ್ ಆರ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!