ಶಿರ್ವ: ಕೋಳಿ ಅಂಕಕ್ಕೆ ದಾಳಿ- ಏಳು ಮಂದಿ ವಶಕ್ಕೆ

ಶಿರ್ವ, ಅ.23: ಮೂಡುಬೆಳ್ಳೆ ಗೂಡುದೊಟ್ಟು ಎಂಬಲ್ಲಿ ಅ.22ರಂದು ಕೋಳಿಅಂಕಕ್ಕೆ ದಾಳಿ ನಡೆಸಿದ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ವಿಜಯ್ ಪ್ರಕಾಶ್ ಕ್ವಾಡ್ರಸ್, ಸುರೇಶ್, ಫ್ರಾನ್ಸಿಸ್ ದೀಪಕ್ ಮೆಂಡೋನ್ಸ್, ಪ್ರಜ್ವಲ್ ಜೋಸೆಫ್ ಮಾರ್ಟೀಸ್, ಪ್ರದೀಪ್, ಸಂತೋಷ್, ಸುಜಿತ್ಯ ಎಂದು ಗುರುತಿಸಲಾಗಿದೆ. ಇವರಿಂದ 4 ಜೀವಂತ ಹುಂಜ ಕೋಳಿ ಗಳು, 2 ಕತ್ತಿ ಬಾಲು, 7,850ರೂ. ನಗದು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!