ಟೋಲ್ ವಿನಾಯಿತಿಗೆ ನಕಲಿ ಆರ್.ಸಿ ಸೃಷ್ಟಿಸಿ ವಂಚನೆ ಪ್ರಕರಣ‌: ಆರೋಪಿಗೆ ಮಧ್ಯಂತರ ಜಾಮೀನು

ಉಡುಪಿ: ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಕಲಿ ಆರ್.ಸಿ ತಯಾರಿಸಿ ತೋರಿಸಿ ವಂಚಿಸಿ ಸುಂಕ ವಿನಾಯಿತಿಗೆ ಯತ್ನಿಸಿದ ಹಿನ್ನೆಲೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿನಲ್ಲಿ ಆರೋಪಿ ಮಯ್ಯಾದಿ ಅಹ್ಮದ್ ಸಾಹೇಬ್ ಎಂಬುವವರು ತಮ್ಮ ಬೊಲೆನೋ ಕಾರಿನ ಆರ್.ಸಿಯನ್ನು ತಿರುಚಿ ಕೋಟ ಪಡುಕರೆ ನಿವಾಸಿ ಎಂಬಂತೆ ದಾಖಲೆ ಸೃಷ್ಟಿಸಿ ಅ.16 ರಂದು ಆರೋಪಿಯು ಟೋಲ್ ಗೇಟ್ ಪಾಸ್‌ ಮಾಡುವ ಸಂದರ್ಭ ಆರ್ ಸಿಯಲ್ಲಿ ತಿರುಚಿರುವುದು ಕಂಡುಬಂದಿದ್ದು, ಅನುಮಾನಗೊಂಡ‌ ಸಾಸ್ತಾನ ಟೋಲ್ ಗೇಟ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಗೇಶ್ ಸರಕಾರದ ಅಧಿಕೃತ ಜಾಲತಾಣ ಪರಿವಾಹನ್ ನಲ್ಲಿ ಪರಿಶೀಲಿಸಿದಾಗ ವಾಹನದ ಸಂಖ್ಯೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ವಿಳಾಸದಲ್ಲಿ ರಿಜಿಸ್ಟರ್ ಆಗಿರುವುದು ಕಂಡುಬಂದಿದೆ.

ಹೆಜಮಾಡಿ ಟೋಲ್ಗೇಟ್ನಲ್ಲಿಯೂ ಪರಿಶೀಲಿಸಿದಾಗ ಅಲ್ಲಿಯೂ ಕೂಡ ಸ್ಥಳೀಯ ವಿಳಾಸದಲ್ಲಿ ನಕಲಿ ಆರ್.ಸಿ ಸಿದ್ದಪಡಿಸಿರುವುದು ಪತ್ತೆಯಾಗಿದೆ ಎಂದು ಆರೋಪಿಸಲಾಗಿದ್ದು ಈ ಬಗ್ಗೆ ಕೋಟ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಾಲಯವು ಪ್ರಕರಣವು ಪ್ರಾಥಮಿಕವಾಗಿ ಸ್ಥಾಪಿತವಾಗಿಲ್ಲವೆಂದು ಪರಿಗಣಿಸಿ ಆರೋಪಿಗೆ ಮಧ್ಯಂತರ ಜಾಮೀನು ಆದೇಶಿಸಿರುತ್ತದೆ. ಆರೋಪಿಯ ಪರವಾಗಿ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿಯವರು ವಾದಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!