ತಾಂತ್ರಿಕ ದೋಷವಿದ್ದ ಏರ್ ಇಂಡಿಯಾ ವಿಮಾನ- ಸೇಫ್ ಲ್ಯಾಂಡ್!
ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಾರಾಟದ ಮಧ್ಯದಲ್ಲೇ ಹೈಡ್ರಾಲಿಕ್ ಸಮಸ್ಯೆ ಉಂಟಾಗಿತ್ತು. ಇದೀಗ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಸೇಫ್ ಲ್ಯಾಂಡ್ ಆಗಿದೆ.
144 ಪ್ರಯಾಣಿಕರಿದ್ದ ವಿಮಾನವು ಸಂಜೆ 5.40 ಕ್ಕೆ ಟೇಕಾಫ್ ಆಗಿತ್ತು ಮತ್ತು ಶೀಘ್ರದಲ್ಲೇ ಸ್ನ್ಯಾಗ್ ಅನ್ನು ವರದಿ ಮಾಡಿತ್ತು. ವಿಮಾನವನ್ನು ಹಿಂತಿರುಗಲು ಹೇಳಲಾಗಿತ್ತು. ಆದರೆ ವಿಮಾನದಲ್ಲಿ ಸಂಪೂರ್ಣ ಇಂಧನದೊಂದಿಗೆ ಮುನ್ನೆಚ್ಚರಿಕೆಯ ಲ್ಯಾಂಡಿಂಗ್ ಅನ್ನು ಪ್ರಯತ್ನಿಸುವುದು ಸೂಕ್ತವಲ್ಲದ ಕಾರಣ, ಪೈಲಟ್‌ಗಳು ವಿಮಾನ ನಿಲ್ದಾಣದ ಸುತ್ತಲೂ ಹಾರುವ ಮೂಲಕ ಅದರಲ್ಲಿರುವ ಇಂಧನ ಖಾಲಿ ಮಾಡಲು ಪ್ರಯತ್ನಿಸಿದ್ದರು