ಉಡುಪಿ-ಉಚ್ಚಿಲ ದಸರಾ: ಶೋಭಾಯಾತ್ರೆಗೆ ಭರದ ಸಿದ್ಧತೆ
ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಐತಿ ಹಾಸಿಕ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಕೊನೆಯ ಹಂತ ತಲುಪಿದ್ದು, ಶರನ್ನವರಾತ್ರಿಯ ವಿಜಯದಶಮಿ ದಿನವಾದ ಶನಿವಾರ ನಡೆಯಲಿರುವ ಭವ್ಯ ಶೋಭಾಯಾತ್ರೆಗೆ ಭರದ ಸಿದ್ಧತೆ ನಡೆಸಲಾಗಿದೆ.
ಕಳೆದ 2 ವರ್ಷಗಳ ದಸರಾ ಮಹೋತ್ಸವದ ಅನುಭವದೊಂದಿಗೆ ಶೋಭಾಯಾತ್ರೆಯನ್ನು ಮಹಾ ಜನ ಸಂಘ, ದಸರಾ ಸಮಿತಿ ಹಾಗೂ ಮೊಗವೀರ ಸಮಾಜದ ಎಲ್ಲ ಗ್ರಾಮಸಭೆಗಳು, ಸಾರ್ವಜನಿಕರ ಮುಕ್ತ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಲು ನಿರ್ಧರಿಸಿದೆ.
ಪೊಲೀಸರ ಜತೆ ಸಭೆ: ಶೋಭಾಯಾತ್ರೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಪೊಲೀಸ್ ಇಲಾಖಾಧಿ ಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಮೆರವಣಿಗೆಯ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಏಕ ನಾಯಕತ್ವದೊಂದಿಗೆ ಶೋಭಾಯಾತ್ರೆ ಮುಂದುವರಿಸಲು ನಿರ್ಧರಿಸಲಾಗಿದೆ. ಪೊಲೀಸರು ಶೋಭಾಯಾತ್ರೆಯ ಮಾರ್ಗವನ್ನು ಪರಿಶೀಲಿಸಿದ್ದು, ಅಗತ್ಯವಿದ್ದೆಡೆ ಹೆಚ್ಚು ಬಂದೋಬಸ್ತ್ ನಿರ್ವಹಿಸಲು ಸಿದ್ಧತೆ ನಡೆಸಿದ್ದಾರೆ.
ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್ ಮತ್ತು ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಹಾಗೂ ಪದಾಧಿ ಕಾರಿಗಳ ಜತೆ ನಡೆದ ಸಭೆಯಲ್ಲಿ ಕಾಪು ಸಿಪಿಐ ಜಯಶ್ರೀ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ.
ಶೋಭಾಯಾತ್ರೆ : ಶನಿವಾರ 3 ಗಂಟೆಗೆ ಶಾರದಾ ದೇವಿ ಮತ್ತು ನವದುರ್ಗೆಯರಿಗೆ ಮಹಾಪೂಜೆ, 4 ಗಂಟೆಗೆ ವಿಗ್ರಹಗಳನ್ನು ವಾಹನಕ್ಕೆ ಸ್ಥಳಾಂತರಿಸುವುದು, 5 ಗಂಟೆಗೆ ಶೋಭಾಯಾತ್ರೆಗೆ ವಿಧ್ಯುಕ್ತ ಚಾಲನೆ ನೀಡಲು ನಿರ್ಧರಿಸಿದ್ದು, ಸಮಯ ಪರಿಪಾಲನೆಗೆ ಮಹತ್ವ ನೀಡಲಾಗಿದೆ. ಡೋನ್ ಮೂಲಕ ಪುಷ್ಪಾರ್ಚನೆ: ಪ್ರಥಮ ದಸರಾ ಮಹೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗಿತ್ತು. ಈ ಬಾರಿ ವಿಶೇಷವಾಗಿ ಡೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪಾರ್ಚನೆಗಾಗಿ ಸಿದ್ಧತೆ ನಡೆಸಲಾಗಿದೆ.
ಶೋಭಾಯಾತ್ರೆಯಲ್ಲಿ ಶ್ರೀ ಶಾರದಾದೇವಿ ಹಾಗೂ ನವದುರ್ಗೆಯರ 10 ಟ್ಯಾಬ್ಲೊಗಳೊಂದಿಗೆ ತುಳು ನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆ ಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾ ಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ 22 ಟ್ಯಾಬ್ಲೊಗಳು, 5 ಕಲಾ ತಂಡ ಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸುಮಾರು ಲಕ್ಷಕ್ಕೂ ಅಧಿಕ ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿ ಬರಲಿದೆ.
ಶೋಭಾಯಾತ್ರೆ ದಾರಿ: ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿ ಹೆದ್ದಾರಿಯ ಪಶ್ಚಿಮ ರಸ್ತೆಗೆ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿಬರಲಿದೆ. ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡಭಾಗದ ಬೀಚ್ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಿಬ ರಲಿದೆ. ಟ್ಯಾಬ್ಲೊಗಳಿಗೆ ಕ್ರಮಸಂಖ್ಯೆ ನೀಡಲಾಗಿದ್ದು, ಶಿಸ್ತುಬದ್ಧ ಚಾಲನೆಗೆ ಸೂಚನೆ ನೀಡಲಾಗಿದೆ.
ಬೀಚ್‌ನಲ್ಲಿ ವ್ಯವಸ್ಥೆ: ಕಾಪು ಬೀಚ್ ಬಳಿ ಬೃಹತ್ ಗಂಗಾರತಿ, ಸಮುದ್ರದಾರತಿ ನಡೆಸಲು ನಿರ್ಧರಿಸಲಾ ಗಿದ್ದು, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಸಮುದ್ರ ಮಧ್ಯೆ 50ಕ್ಕೂ ಹೆಚ್ಚು ಬೋಟ್‌ಗಳಿಂದ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಸ ಲಾಗುವುದು. ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು.
ವಿಶ್ವಪ್ರಸಿದ್ಧಿ ಪಡೆದಿರುವ ಉಡುಪಿ ಉಚ್ಚಿಲ ದಸರಾ ಶೋಭಾಯಾತ್ರೆಯನ್ನು ಅವಿಸ್ಮರ ಣೀಯಗೊಳಿಸಲು ಸಿದ್ದತೆ ನಡೆಸಲಾಗಿದೆ. ಈ ಬಾರಿ ಕಳೆದ ಬಾರಿಗಿಂತಲೂ ಅಧಿಕ ಭಕ್ತರು ಮಹಾಲಕ್ಷ್ಮೀ ಸನ್ನಿಧಿಯ ದಸರಾ ಮಹೋತ್ಸವದಲ್ಲಿ ಭಾಗಿಯಾ ಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಜಾತಿ ಮತ ಭೇದ ಮರೆತು ಸರ್ವ ಸಮಾಜದವರೂ ಮಹೋತ್ಸವದಲ್ಲಿ ಭಾಗಿಯಾಗಿದ್ದು ಮಹೋತ್ಸವಕ್ಕೆ ಮೆರುಗು ತಂದಿದೆ. ಮುಂದಿನ ಬಾರಿ ಇನ್ನಷ್ಟು ವಿಜೃಂಭಣೆಯಿಂದ ಮಹೋತ್ಸವ ನಡೆಸಲು ಸ್ಫೂರ್ತಿ ನೀಡಿದೆ.
–ನಾಡೋಜ ಡಾ.ಜಿ.ಶಂಕರ್, ಉಡುಪಿ ಉಚ್ಚಿಲ ದಸರಾ ರೂವಾರಿ
ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಶೋಭಾಯಾತ್ರೆಯನ್ನು ನಿಗದಿತ ಸಮಯಕ್ಕೆ ಮುಗಿಸಲು ಸಿದ್ಧತೆ ನಡೆಸಲಾಗಿದೆ. ರಾತ್ರಿ 10 ಗಂಟೆಗೆ ಡಿಜೆ ಸಂಗೀತ ಸ್ಥಗಿತಗೊಳಿಸಲಾಗುವುದು. ಶೋಭಾಯಾತ್ರೆಯಲ್ಲಿ ಭಾಗವಹಿಸುವವರು ಸ್ವಂತ ವಾಹನ ಬಳಸದೆ ಬೈಕ್, ಬಸ್‌ಗಳಲ್ಲೇ ಬರಬೇಕಾಗಿ ವಿನಂತಿಸುತ್ತೇನೆ. ಹೆದ್ದಾರಿಗೆ ಸ್ವಂತ ವಾಹನಗಳನ್ನು ತರಬೇಡಿ. ಸುವ್ಯವಸ್ಥಿತ ಶೋಭಾಯಾತ್ರೆ ಬಂದೋಬಸ್‌ಗೆ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.
–ಪ್ರಸನ್ನ ಎಂ.ಎಸ್., ಠಾಣಾಧಿಕಾರಿ, ಪಡುಬಿದ್ರಿ ಪೊಲೀಸ್ ಠಾಣೆ