ಉಡುಪಿ ಮಿಷನ್ ಆಸ್ಪತ್ರೆಯ ನೂತನ ಎಲ್‌ಎಂಎಚ್ ಕ್ಯಾಂಟೀನ್ ಉದ್ಘಾಟನೆ

ದೇವರ ಆಶೀರ್ವಾದ, ಪರಿಶ್ರಮದಿಂದ ಯಶಸ್ಸು ಸಾಧ್ಯ: ಬಿಷಪ್ ಹೇಮಚಂದ್ರ ಕುಮಾರ್

ಉಡುಪಿ: ಉಡುಪಿಯ ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್(ಮಿಷನ್ ಆಸ್ಪತ್ರೆ) ಆವರಣದಲ್ಲಿ ನೂತನವಾಗಿ ಆರಂಭಿಸಲಾದ ಎಲ್‌ಎಂಎಚ್ ಕ್ಯಾಂಟೀನ್(ಡಾಕ್ಟರ್ಸ್‌ ಕಿಚನ್) ಗುರುವಾರ ಉದ್ಘಾಟನೆಗೊಂಡಿತು.

ಡಾಕ್ಟರ್ಸ್ ಕಿಚನ್ ಉದ್ಘಾಟಿಸಿ ಮಾತನಾಡಿದ ಸಿಎಸ್‌ಐ- ಕೆಎಸ್‌ಡಿಯ ಬಿಷಪ್ ಹೇಮಚಂದ್ರ ಕುಮಾರ್ ಅವರು, ದೇವರ ಆಶೀರ್ವಾದ ಹಾಗೂ ಪರಿಶ್ರಮ ಇದ್ದರೆ ಯಾವುದೇ ಕಾರ್ಯ ಯಶಸ್ವಿಯಾಗು ತ್ತದೆ. ಕಂಡ ಕನಸನ್ನು ನನಸು ಮಾಡಬೇಕಾದರೆ ಸಾಧಿಸುವ ಛಲ ಹಾಗೂ ದೃಢ ವಿಶ್ವಾಸ ಅಗತ್ಯ. ಸುಸಜ್ಜಿತ ಹಾಗೂ ಶುಚಿತ್ವದಿಂದ ಕೂಡಿರುವ ಈ ಕ್ಯಾಂಟಿನ್ ಉತ್ತಮ ಆಹಾರ ಒದಗಿಸಲಿ ಎಂದು ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ. ಸುನೀಲ್ ಜತ್ತನ್ನ ಮಾತನಾಡಿ, ಗುಣಮಟ್ಟದ ಆಹಾರ, ಹೊಟೇಲ್ ನಡೆಸುವವರ ಅಪಾರ ಅನುಭವ, ಪಥ್ಯ ಆಹಾರ, ಶುಚಿತ್ವದ ಆದ್ಯತೆ ಮೇರೆಗೆ ಆರಂಭಿಸಲಾಗಿದೆ. ಮುಂದಿನ ನಮ್ಮ ಆಸ್ಪತ್ರೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ದೇವೇಂದ್ರ ನಾಯಕ್ ಮಾತನಾಡಿದರು. ಸಿಎಸ್‌ಐ ಕೆಎಸ್‌ಡಿ ಏರಿಯಾ ಚೈಯರ್‌ಮೆನ್ ರೆ. ಐವನ್ ಡಿ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ಸುನೀಲ್ ಜತ್ತನ್ನ ಅವರನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಸ್ವಾಗತಿಸಿದರು. ಪಿಆರ್‌ಓ ರೋಹಿ ರತ್ನಾಕರ್ ವಂದಿಸಿದರು. ಹೇಮಲತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!