ಬುದ್ಧನಿಗೆ ಹಿಂದೂ ಧರ್ಮದ ಕಾಟ: ಜಯನ್ ಮಲ್ಪೆ

ಮಲ್ಪೆ: ಸಮಾನತೆ ಮತ್ತು ಮಾನವೀಯತೆಯ ತಳಹದಿಯ ಮೇಲೆ ನಿಂತು ವೈಚಾರಿಕತೆಯನ್ನು ಎತ್ತಿ ಹಿಡಿದ ಬೌದ್ಧ ಧರ್ಮಕ್ಕೆ ದೇವರು ನೀತಿ ಎರಡೂ ಇಲ್ಲದ ಹಿಂದೂ ಧರ್ಮ ನಿರಂತರ ಕಾಟ ನೀಡುತ್ತಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಇಂದು ಮಲ್ಪೆಯ ಅಂಬೇಡ್ಕರ್ ಯುವಸೇನೆ ಮತ್ತು ಬೌದ್ಧ ಟ್ರೆಸ್ಟ್ ಉಡುಪಿ ಜಿಲ್ಲೆಯಿಂದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಹೊರಡುವ ಮುನ್ನ ಶುಭ ಹಾರೈಸಿ ಮಾತನಾಡುತ್ತಾ, ಹಿಂದೂ ಧರ್ಮ ಬುದ್ಧನನ್ನು ಶತ್ರುವಾಗಿ ಕಾಣುವುದು ಅವಿವೇಕ. ಜಾತಿಯತೆ ಭದ್ರವಾಗಿ ಬೇರೂರಿರುವ ಮಾನಸಿಕ ಪ್ರವೃತ್ತಿಯ ಹಿಂದೂ ಧರ್ಮ ಕುಡಿಯಲೂ ನೀರು ಕೊಡದ, ಕೊನೇ ಪಕ್ಷ ದೇವರನ್ನೂ ನೋಡಲು ಬಿಡದ ಧರ್ಮ ಧರ್ಮವೇ ಅಲ್ಲ. ದಲಿತರು ವಿದ್ಯಾವಂತರಾಗುವುದನ್ನು ನಿಷೇಧಿಸಿದ,ದಲಿತರ ಭೌತಿಕ ಸುಖಗಳನ್ನೆಲ್ಲಾ ಸರ್ವನಾಶ ಮಾಡಿದ ಹಿಂದೂ ಧರ್ಮ ಪ್ರಸ್ತುತ ಭೌದ್ಧ ದರ್ಮದ ಅವನತಿಗಾಗಿ ಕಾದು ಕುಳಿತಿದೆ ಎಂದರು.

ಬಳಿಕ ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದಲ್ಲಿ ಉಡುಪಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಹೊರಟ ಬಸ್ಸಿಗೆ ಹಸಿರು ನಿಸಾನೆ ತೋರಿಸಿದರು. ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರೋಶನ್ ಅವರು ಡಾ.ಬಾಬಾ ಸಾಹೇಬರ ಜೀವನದ ನೈಜ ಇತಿಹಾಸ ಅರ್ಥವಾಗುವ ಮಹಾ ದೀಕ್ಷಾ ಭೂಮಿಗೆ ಹೋರಟ ಯಾತ್ರಾರ್ಥಿಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಬೌದ್ಧ ಟ್ರೆಸ್ಟ್‌ನ ರವೀಂದ್ರ ಬಂಟಕಲ್ಲು, ದಲಿತ ಮುಖಂಡರಾದ ಹರೀಶಸಾಲ್ಯಾನ್, ದಯಾಕರ್ ಮಲ್ಪೆ, ಸತೀಶ್ ಕಪ್ಪೆಟ್ಟು,ರವಿ ಲಕ್ಷಿ ನಗರ, ಸುಕೇಶ್ ನಿಟ್ಟೂರು, ಸಾಧು ಚಿಟ್ಪಾಡಿ, ಬಿ.ಎನ್. ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!