ಸ್ವದೇಶಿ ಕಲ್ಪನೆಯ “ಗೋಮಯ ಜ್ಯೋತಿ” ಸಾವಯವ ದೀಪ ಮಾರುಕಟ್ಟೆಗೆ
ಉಡುಪಿ(ಉಡುಪಿ ಟೈಮ್ಸ್ ವರದಿ): ದೀಪಾವಳಿ ಸಂದರ್ಭದಲ್ಲಿ ಪ್ರಧಾನಿಗಳ ಸ್ವದೇಶಿ ಕಲ್ಪನೆ ಅನುಗುಣವಾಗಿ ಈ ಬಾರಿಯ ದೀಪಾವಳಿಯ ಜ್ಯೋತಿ ಕೇವಲ ನಿಮ್ಮ ಮನೆಯನ್ನು ಮಾತ್ರವಲ್ಲ ರಾಷ್ಟ್ರದ ಸ್ವದೇಶಿ ಕಲ್ಪನೆ ಬೆಳಗಲಿ ಎಂಬ ಉದ್ದೇಶದಿಂದ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಈ ಬಾರಿ ಗೋಮಯ ಜ್ಯೋತಿ ಎಂಬ ಸಾವಯವ ದೀಪದ ಯೋಜನೆಯನ್ನು ಜಾರಿಗೆ ತಂದಿದೆ.
ಪುಣ್ಯಕೋಟಿ ಗೋಸೇವಾ ಟ್ರಸ್ಟ್ ಆರೂರು , ಮತ್ತು ಜಾರ್ಖಂಡಿನ ಟೀಮ್ ಗೌಮಾ ಇವರಲ್ಲಿ ತಯಾರಿಸಿದ 75 ಶೇಕಡಾ ಗೋಮಯ 25% ಮಣ್ಣು ಮಿಶ್ರಿತ ದೀಪವನ್ನು ತಯಾರು ಮಾಡಲಾಗುತ್ತಿದೆ. ಈ ದೀಪದ ವಿಶೇಷತೆ ಏನೆಂದರೆ ದೀಪವು ನೀರಿನಲ್ಲಿ ತೇಲುತ್ತದೆ.ತದನಂತರ ಇದನ್ನು ಗಿಡ-ಮರಗಳಿಗೆ ಗೊಬ್ಬರವಾಗಿಯೂ ಬಳಸಬಹುದು. ಈ ದೀಪವನ್ನು ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಸೇವಾ ದೃಷ್ಟಿ ಮತ್ತು ಸ್ವದೇಶಿ ಕಲ್ಪನೆಯ ಅಂಗವಾಗಿ ಪರಿಸರ ಪೂರಕ ನಡೆಸಲಾಗುತ್ತಿದೆ. ಒಂದು ಪ್ಯಾಕೆಟ್ ಬೆಲೆ 50.00 (ಐವತ್ತು ರೂಪಾಯಿ) ಇದರಲ್ಲಿ 12 ದೀಪವು ಇರಲಿದೆ .
ಈ ದೀಪವು ಸಂತೋಷ್ ಟ್ರೇಡರ್ಸ್ ಕಡಿಯಾಳಿ, ತೇಜಸ್ ಜನರಲ್ ಸ್ಟೋರ್ ಕಲ್ಸಂಕ, ದುರ್ಗಾ ಜನರಲ್ ಸ್ಟೋರ್ ಪರ್ಕಳ, ಉಡುಪಿ ನಗರದ ಕಲ್ಸಂಕ ,ಎಂಜಿಎಂ, ಮಣಿಪಾಲ, ಈಶ್ವರನಗರ, ಎಲ್ ವಿ ಟಿ, ಬ್ರಹ್ಮಾವರದ ತಾತ್ಕಾಲಿಕ ಪಟಾಕಿ ಅಂಗಡಿಗಳಲ್ಲಿ ದೊರೆಯುತ್ತದೆ, ಈ ದೀಪವು ಬೇಕಾದಲ್ಲಿ ಈ ನಂಬರನ್ನು ಸಂಪರ್ಕಿಸಬಹುದಾಗಿ (9008190489) ಗಣೇಶೋತ್ಸವ ಸಮಿತಿ ಕಡಿಯಾಳಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.