ಸಂಗಮ ಸಾಂಸ್ಕೃತಿಕ ವೇದಿಕೆ ಉದ್ಯಾವರ: ಸಂಗಮ ದಾಂಡಿಯಾ
ಉಡುಪಿ: ಸಂಗಮ ಸಾಂಸ್ಕೃತಿಕ ವೇದಿಕೆ ಕುತ್ಪಾಡಿ ಇದರ ವತಿಯಿಂದ ಕುತ್ಪಾಡಿ ಶಾಲಾ ವಠಾರದಲ್ಲಿ ಸಾರ್ವಜನಿಕರಿಗಾಗಿ ಸಂಗಮ ದಾಂಡಿಯಾ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಮಾಜಸೇವಕಿ ನಿರುಪಮಾ ಪ್ರಸಾದ್ ಶೆಟ್ಟಿ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿರಂತರವಾಗಿ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಈ ವೇದಿಕೆಯು ಒಂದು ಮಾದರಿ ಸಂಸ್ಥೆಯಾಗಿದೆ. ಎಲ್ಲಾ ಸಮುದಾಯಗಳನ್ನು ಒಳಗೊಂಡ ಈ ಸಂಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಪ್ರೋತ್ಸಾಹ ನೀಡುವ ಮೂಲಕ ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದರು. ವೇದಿಕೆಯಲ್ಲಿ ದಾಂಡಿಯಾ ತರಬೇತಿ ನೀಡಿದ ಪ್ರಿಯಾ ಶರತ್ ಕುತ್ಪಾಡಿ ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಭಂಡಾರಿ ಕುತ್ಪಾಡಿ, ಬಿಲ್ಲವ ಸಂಘ ಕುತ್ಪಾಡಿ ಇದರ ಉಪಾಧ್ಯಕ್ಷ ಸುರೇಶ್ ಪೂಜಾರಿ ಕುತ್ಪಾಡಿ, ವೇದಿಕೆಯ ಪ್ರೋತ್ಸಾಹಕರಾದ ದಯಾನಂದ ಪೂಜಾರಿ ಕಂಪನ್ ಬೆಟ್ಟು, ಉದ್ಯಮಿ ಸುಧಾಕರ ಶೆಟ್ಟಿ ಗುಡ್ಡೆಯಂಗಡಿ, ಸರೋಜಾ ಅಶೋಕ್ ಭಂಡಾರಿ ಕುತ್ಪಾಡಿ, ಸಂಸ್ಥೆಯ ಸಲಹೆಗಾರರಾದ ಪ್ರತಾಪ್ ಕುಮಾರ್ ಉದ್ಯಾವರ, ಯಕ್ಷಗಾನ ತಂಡದ ಸಂಚಾಲಕಿ ಸುಜಾತಾ ಗಣೇಶ್, ಸರೋಜಾ ಚಂದ್ರಶೇಖರ್ ಕಡೆಕಾರ್ ,ಸಂಸ್ಥೆಯ ಅಧ್ಯಕ್ಷ ಭಾಸ್ಕರ ಪೂಜಾರಿ ಸಂಪಿಗೆ ನಗರ ಉಪಸ್ಥಿತರಿದ್ದರು ಗೌರವಾಧ್ಯಕ್ಷ ಗಣೇಶ್ ಕುಮಾರ್ ಸಂಪಿಗೆ ನಗರ ಪ್ರಾಸ್ತಾವಿಕ ಮಾತುಗಳ್ಳನ್ನಾಡಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪಾಲನ್ ಸ್ವಾಗತಿಸಿದರು, ಕೋಶಾಧಿಕಾರಿ ನವೀನ್ ಕುಮಾರ್ ಸಂಪಿಗೆ ನಗರ ಧನ್ಯವಾದ ನೀಡಿದರು ಪ್ರಧಾನ ಕಾರ್ಯದರ್ಶಿ ಕುಮಾರಿ ಮೇಘನಾ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.