ಉಡುಪಿ ಉಚ್ಚಿಲ ದಸರಾ-2024: ಏಕಕಾಲಕ್ಕೆ ನೂರೊಂದು ವೀಣೆಗಳ ವಾದನ

ಉಚ್ಚಿಲ: ದ.ಕ.ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಇವರ ವ್ಯವಸ್ಥಾಪಕತ್ವದ  ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ 2024 ಸೋಮವಾರ ಲಲಿತಾ ಪಂಚಮಿಯಂದು ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ ಕಾರ್ಯಕ್ರಮವು ಕಲಾಸ್ಪಂದನ ಕಲಾಶಾಲೆಯ ಪವನ ಬಿ ಆಚಾರ್‌ರವರ ನೇತೃತ್ವದ ಶತವೀಣಾವಲ್ಲರಿ ಕಾರ್ಯಕ್ರಮವು ಶ್ರೀಮತಿ ಶಾಲಿನಿ ಡಾ. ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ನಡೆಯಿತು.

ವಿದುಷಿ ಪವನ ಬಿ. ಆಚಾರ್ ಮಣಿಪಾಲ್ ನಿರ್ದೇಶನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ವೀಣಾವಾದಕರನ್ನೊಳಗೊಂಡ ತಂಡದೊಂದಿಗೆ ಏಕಕಾಲದಲ್ಲಿ ವೀಣೆಗಳ ವಾದನ ಕಾರ್ಯಕ್ರಮ ನಡೆಯಿತು.

ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್, ರಿದಮ್ ಪ್ಯಾಡ್‌ನಲ್ಲಿ ಕಾರ್ತಿಕ್ ಭಟ್ ಇನ್ನಂಜೆ, ತಂಬೂರಿಯಲ್ಲಿ ವಿದುಷಿ ಸುರೇಖಾ ಎ. ಭಟ್‌, ತಾಳ ಹೇಮಲತಾ ರಾವ್, 108 ವೀಣಾ ವಾದಕ ಶಿಷ್ಯಂದಿರು ಸಹಕರಿಸಿದ್ದರು.

ಈ ಸಂದರ್ಭ ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮುಲ್ಕಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ದೇವಳದ ಪ್ರಧಾನ ಅರ್ಚಕ ವೇ|ಮೂ| ಕೆ.ವಿ. ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಕಾರ್ಯದರ್ಶಿ ನಾರಾಯಣ ಸಿ ಕರ್ಕೇರ, ಕೋಶಾಧಿಕಾರಿ ಸುಧಾಕರ್ ಕುಂದರ್, ದಸರಾ ಮಹೋತ್ಸವ ಸಂಚಾಲಕ ವಿನಯ ಕರ್ಕೆರ ಮಲ್ಪೆ, ಸದಸ್ಯರಾದ ಮೋಹನ್ ಬಂಗೇರ ಕಾಪು, ದಿನೇಶ್ ಎರ್ಮಾಳು, ಮೊಗವೀರ ಮಹಾಜನ ಸಂಘದ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾರಾಣಿ ಬೋಳೂರು, ಪ್ರಧಾನ ಕಾರ್ಯದರ್ಶಿ ಉಷಾ ಲೋಕೇಶ್, ಕಾಪು ನಾಲ್ಕುಪಟ್ಣ ಮೊಗವೀರ ಸಭಾ ಉಚ್ಚಿಲ ಅಧ್ಯಕ್ಷ ಮನೋಜ್ ಪಿ. ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಎಸ್ ಕರ್ಕೇರ, ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ  ಆಡಳಿತ ಮಂಡಳಿ ಸದಸ್ಯರಾದ ವಾಸುದೇವ ಸಾಲ್ಯಾನ್ ಕಟಪಾಡಿ, ಗುಂಡು ಬಿ ಅಮೀನ್ ಕಿದಿಯೂರು, ಸತೀಶ್ ಎಸ್ ಅಮೀನ್ ಬೆಣ್ಣೆ ಕುದ್ರು, ಮಂಜುನಾಥ್ ಸುವರ್ಣ ಬ್ರಹ್ಮಾವರ, ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶಿವರಾಮ ಕೋಟ, ಲೋಕೇಶ್ ಮೆಂಡನ್ ಉಪ್ಪೂರು, ಕೇಶವ ಎಂ ಕೋಟ್ಯಾನ್ ಮಲ್ಪೆ, ಗಿರೀಶ್ ಕುಮಾರ್ ಪಿತ್ರೋಡಿ, ಜಯಂತ್ ಸಾಲ್ಯಾನ್ ಕನಕೋಡ, ಕಿರಣ್ ಕುಮಾರ್ ಪಿತ್ರೋಡಿ, ಸುಧಾಕರ ವಿ ಸುವರ್ಣ ಉಚ್ಚಿಲ, ನಾರಾಯಣ ಸಿ ಕರ್ಕೇರ ಪಡುಬಿದ್ರಿ ಕಾಡಿಪಟ್ಣ, ಸತೀಶ್ ಆರ್ ಕರ್ಕೇರ ಸುರತ್ಕಲ್, ವಿಜಯ ಸುವರ್ಣ ಕುಳಾಯಿ,  ಹೇಮಂತ್ ತಿಂಗಳಾಯ ಹೊಯ್ಗೆ ಬಜಾರ್, ಪುರುಷೋತ್ತಮ ಕೋಟ್ಯಾನ್ ಬೋಳೂರು, ಯಶವಂತ್ ಪಿ ಮೆಂಡನ್ ಬೋಳೂರು, ಮೊದಲಾದವರು ಉಪಸ್ಥಿತರಿದ್ದರು.

ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!