ಅ.9 ರಂದು ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ
ಉಡುಪಿ: ಉತ್ತರ ಹಾಗೂ ದಕ್ಷಿಣಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‌ನ ಎರಡನೇ ಶಾಖೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ’ ಉಡುಪಿ-ಮಣಿಪಾಲ ರಸ್ತೆಯಲ್ಲಿರುವ ಕುಂಜಿಬೆಟ್ಟುವಿನ ಕಲ್ಸಂಕದಲ್ಲಿ ಟೈಮ್ಸ್ ಸ್ಕ್ವೇರ್ ಮಾಲ್‌ನಲ್ಲಿ ಅ.09 ರಂದು ಶುಭಾರಂಭಗೊಳಲಿದೆ.
ಈ ಬಗ್ಗೆ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ದಿ. ಓಶಿಯನ್ ಪರ್ಲ್ಸ್ ಹೋಟೆಲ್ಸ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ರೋಷನ್ ಬನಾನಾ ಮಾತನಾಡಿ ದೇಗುಲಗಳ ನಗರಿ ಎಂದೇ ಖ್ಯಾತಿ ಹೊಂದಿರುವ ಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್ ನಲ್ಲಿ “ಗ್ರ‍್ಯಾಂಡ್ ದಿ ಪೆಸಿಫಿಕ್ 1 ಹಾಲ್” ಸುಮಾರು 2000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆಗಳು, ಬೃಹತ್ ಸಮ್ಮೇಳನ ಮತ್ತು ಅದ್ಧೂರಿಯ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ ಎಂದರು.
‘ಪೆಸಿಫಿಕ್ 2’ ಹಾಲ್ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಇದು ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ.
ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಪ್ರೆಸಿಡೆಂಟಲ್ ಸೂಟ್, ಕ್ಲಬ್ ಸೂಟ್ಸ್, ಫ್ಯಾಮಿಲಿ ಸೂಟ್ ಮತ್ತು ಡಿಲಕ್ಸ್ ರೂಮ್‌ಗಳು ಒಟ್ಟು 67 ಐಷಾರಾಮಿ ಕೊಠಡಿಗಳು ಲಭ್ಯವಿದೆ ಎಂದು ತಿಳಿಸಿದರು.
ಜಿಮ್, ಫಿಟ್ನೆಸ್ ಸೆಂಟರ್, ಬಿಜಿನೆಸ್ ಲಾಂಜ್ ಸೌಲಭ್ಯಗಳು ಇಲ್ಲಿವೆ. ಈಜು ಪ್ರಿಯರಿಗೆ ಅನುಕೂಲಕ್ಕಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ಸಹ ನಿರ್ಮಾಣ ಮಾಡಲಾಗಿದೆ.
ಗ್ರಾಹಕರ ವಾಸ್ತವ್ಯವು ಆರೋಗ್ಯದಾಯಕ, ಅನುಕೂಲಕರವಾಗಿರಬೇಕು ಎಂಬ ಉದ್ದೇಶವನಿಸಿಕೊಂಡೆೆ ರೂಮುಗಳನ್ನು ವಿನ್ಯಾಸ ಗೊಳಿಸಲಾಗಿದೆ. ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಈ ನೂತನ ಹೋಟೆಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನಿಸ್ ಆಹಾರ ಉತ್ಪನ್ನಗಳನ್ನು ಹೊಂದಿರುವ, ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೊಂದು ವಿಶೇಷ.
ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್‌ನಲ್ಲಿ ಜನತೆಗೆ ವೈಭವದ, ಐಷಾರಾಮಿಯ ಮತ್ತು ಆಧುನಿಕತೆಯ ರಸ ಗಳಿಗೆಯನ್ನು ಅನುಭವಿಸುವ ಪ್ರಮುಖ ತಾಣವಾಗಲಿದೆ. ಜೊತೆಗೆ ವ್ಯಾಪಾರ ಮತ್ತು ಉತ್ತಮ ಮನರಂಜನೆಗಾಗಿ ಟೈಮ್ಸ್ ಸ್ಕ್ವೇರ್ ಮಾಲ್ ಇದ್ದು ವ್ಯಾಪಾರಸ್ಥರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಸಂಸ್ಥೆಯ ಸಾಗರ್ ಹಾಗೂ ಸ್ವಾಗತ ರೆಸ್ಟೋರೆಂಟ್‌ಗಳು ಈಗಾಗಲೇ ದೆಹಲಿ ಸಹಿತ ಉತ್ತರ ಭಾರತದಾದ್ಯಂತ ಜನಪ್ರಿಯಗೊಂಡಿವೆ. ಓಶಿಯನ್ ಪರ್ಲ್ ಹೋಟೆಲ್ ಮಂಗಳೂರು ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದೆ.
ಸಾಗರ ರತ್ನ ಮತ್ತು ಓಶಿಯನ್ ಪರ್ಲ್ ಸಮೂಹ ಸಂಸ್ಥೆಗಳ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ ಮತ್ತು ವ್ಯಕ್ತಿ ಎಂದರೆ ಜಯರಾಮ್ ಬನಾನ್. ಅವರು ಈ ಎರಡೂ ಸಂಸ್ಥೆಗಳ ಅಧ್ಯಕ್ಷರೂ ಹೌದು, ‘ಸಾಗರ ರತ್ನ’, ‘ಶ್ರೀರತ್ನ’ ಮತ್ತು ‘ಸ್ವಾಗತ್’ ರೆಸ್ಟೋರೆಂಟ್‌ಗಳ ಮಾಲೀಕರು. ದೆಹಲಿ, ಉತ್ತರ ಭಾರತದಾದ್ಯಂತ ‘ಸಾಗರ ರತ್ನ’ ಹೆಸರಿನ ವೆಜ್ ಮತ್ತು ‘ಸ್ವಾಗತ್’ ಹೆಸರಿನ ನಾನ್ ವೆಜ್ ರೆಸ್ಟೋರೆಂಟ್ ಮತ್ತು ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಅವರ ಸಾಧನೆಗೆ, ಸಮಾಜಕ್ಕೆ ನೀಡಿದ ಕೊಡುಗೆಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.
ಜಯರಾಮ್ ಬನಾನ್‌ರವರ ಹಿರಿಯ ಪುತ್ರ ರೋಷನ್ ಬನಾನ್ ತಂದೆಯೊಂದಿಗೆ ಉದ್ಯಮದಲ್ಲಿದ್ದಾರೆ. ತಂದೆಯ ಸರಳತೆ, ವ್ಯವಹಾರ ಚತುರತೆ ಸಹಜವಾಗಿಯೇ ರೋಷನ್‌ಗೂ ಬಂದಿದೆ. ಹೋಟೆಲ್ ಉದ್ಯಮದ ಜೊತೆ ಜೊತೆಗೆ ಸಮಾಜಮುಖಿ ಚಿಂತನೆ, ಸಾಮಾಜಿಕ ಬದ್ಧತೆ, ಜನಪರ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದಿ.ಓಶಿಯನ್ ಪರ್ಲ್ಸ್ ಹೋಟೆಲ್ಸ್ ಗ್ರೂಪ್ ಚೆಯರ್ ಮೆನ್ ಜಯರಾಮ ಬನಾನಾ, ವೈಸ್ ಪ್ರೆಸಿಡೆಂಟ್ ದಿ. ಓಶಿಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ಸ್ ಉಪಾಧ್ಯಕ್ಷ ಗಿರೀಶ್ ಪಿ.ವಿ.,ವಿಪಿ,ಪ್ರಾಜೆಕ್ಟ್ ದಿ.ಓಶಿಯನ್ ಪರ್ಲ್ ಶಿವಕುಮಾರ್, ಟೈಮ್ ಸ್ಕ್ವೇರ್ ಮಾಲ್ ನಿರ್ದೇಶಕರಾದ ಜೆರ್ರಿ ಡಯಾಸ್, ಜೇಸನ್ ಡಯಾಸ್, ಗ್ಲೆನ್ ಡಯಾಸ್ ಮತ್ತು ಪ್ರಶಾಂತ್ ಆಚಾರ್ಯ ಇದ್ದರು.