ಉಡುಪಿ: ಸ್ಥಳೀಯರಿಗೆ ತೊಂದರೆಯಾಗದಂತೆ ಹೋಂ ಸ್ಟೇ, ರೆಸಾರ್ಟ್‌ಗಳು ಕಾರ್ಯನಿರ್ವಹಿಸಬೇಕು

ಉಡುಪಿ, ಅ.07: ಜಿಲ್ಲೆಯ ಕೆಲವು ಹೋಂ ಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಷರತ್ತುಗಳನ್ನು ಪಾಲಿಸದೇ ಅನೈತಿಕ ಚಟುವಟಿಕೆಗಳನ್ನು ಹಾಗೂ ಸ್ಥಳೀಯರಿಗೆ ತೊಂದರೆಯಾಗುವಂತೆ ಕಾರ್ಯನಿರ್ವಹಿಸುತ್ತಿರುವ ಕುರಿತು ಸ್ಥಳಿಯರಿಂದ ದೂರುಗಳು ಕೇಳಿ ಬಂದಿರುತ್ತವೆ.ಇಲಾಖೆಯಿಂದ ಅನುಮೋದನೆ ಪಡೆದು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ ಸ್ಟೇ ಹಾಗೂ ರೆಸಾರ್ಟ್ಗಳು ಸ್ಥಳೀಯರಿಗೆ ತೊಂದರೆಯಾಗದAತೆ ಇಲಾಖೆಯ ಷರತ್ತುಗಳನ್ವಯ ಕಾರ್ಯನಿರ್ವಹಿಸ ಬೇಕು. ಒಂದುವೇಳೆ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸಿ, ಸ್ಥಳೀಯರಿಗೆ ತೊಂದರೆ ಉಂಟಾದಲ್ಲಿ ಸದರಿ ಹೋಂ ಸ್ಟೇ ಹಾಗೂ ರೆಸಾರ್ಟ್ಗಳ ಅನುಮೋದನೆಗಳನ್ನು ರದ್ದುಪಡಿಸಲಾಗುವುದು.

ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಯನ್ನು ಪಡೆದ ನಂತರವೇ ಹೋಂ ಸ್ಟೇ, ರೆಸಾರ್ಟ್ ಹಾಗೂ ಯಾವುದೇ ಇತರೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕು. ಆದರೆ ಕೆಲವೊಂದು ಹೋಂ ಸ್ಟೇ, ರೆಸಾರ್ಟ್ಗಳು ಹಾಗೂ ಇತರೆ ಪ್ರವಾಸೋದ್ಯಮ ಚಟುವಟಿಕೆಗಳು ಪರವಾನಿಗೆಯ ನ್ನು ಪಡೆಯದೇ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಪರವಾನಿಗೆ ಇಲ್ಲದೇ ನಡೆಸುತ್ತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸಲಾಗುವುದು ಹಾಗೂ ಪರವಾನಿಗೆಯನ್ನು ಪಡೆದ ನಂತರ ಸದರಿ ಚಟುವಟಿಕೆಯನ್ನು ನಡೆಸಬಹುದಾಗಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!