ಉಡುಪಿ “ಗೀತಾಂಜಲಿ ಸಿಲ್ಕ್ಸ್”: ಅ.9ರಂದು ಪುರುಷರ ವಿಭಾಗದ ವಿಸ್ತೃತ ಮಳಿಗೆ ಉದ್ಘಾಟನೆ
ಉಡುಪಿ,ಅ.07(ಉಡುಪಿ ಟೈಮ್ಸ್ ವರದಿ): ನಗರದ ಪ್ರಖ್ಯಾತ ಜವಳಿ ಮಳಿಗೆ “ಗೀತಾಂಜಲಿ ಸಿಲ್ಕ್ಸ್“ನ ನವೀಕೃತ ಪುರುಷರ ಉಡುಪುಗಳ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಅ.9 ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ಕರಾವಳಿ ಕರ್ನಾಟಕದ ಅತೀ ದೊಡ್ಡ ಜವಳಿ ಮಳಿಗೆ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಮಹಡಿಗಳನ್ನು ಹೊಂದಿದ್ದು, ಇದೀಗ ನಮ್ಮ ಒಂದನೇ ಮಹಡಿಯಲ್ಲಿ ಸ್ವದೇಶಿ ಹಾಗು ವಿದೇಶಿಯ ಎಲ್ಲಾ ಪ್ರಮುಖ ಬ್ರಾಂಡ್‌ಗಳು, ಮದುವೆ ಹಾಗೂ ಸಮಾರಂಭಗಳಿಗೆ ಬೇಕಾದ ಆದುನಿಕ – ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್ ವೆರ್, ಕ್ಯಾಶುಯಲ್ ವೆರ್, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್ – ಶರ್ಟಿಂಗ್ ಹಾಗೂ ಪುರುಷರ ಒಳ ಉಡುಪುಗಳನ್ನು ಒಳಗೊಂಡ ಅತೀ ವಿಶಾಲವಾದ ವಿಭಾಗ ಉದ್ಘಾಟನೆಗೊಳ್ಳಲಿದೆ.
“ಗ್ರಾಹಕರೇ ನಮ್ಮ ದೇವರು” ವಿಶೇಷ ಪರಿಕಲ್ಪನೆ: ಕಳೆದ ಒಂಬತ್ತು ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನಮಗೆ ನೀಡಿದ ಅದ್ಭುತ ಸಹಕಾರಕ್ಕೆ ನಾವು ಸದಾ ಕ್ರತಜ್ಞರು. “ಗ್ರಾಹಕರೇ ನಮ್ಮ ದೇವರು” ಎಂಬ ಪರಿಕಲ್ಪನೆಯೊಂದಿಗೆ ಅ.09 ರ ಬುಧವಾರ ಬೆಳಿಗ್ಗೆ 9.45 ಕ್ಕೆ ಸರಿಯಾಗಿ ಗೀತಾಂಜಲಿ ಸಿಲ್ಸ್ ನ ಒಂದನೇ ಮಹಡಿಯಲ್ಲಿ ನಡೆಯುವ ಉದ್ಘಾಟನೆಯನ್ನು ನಮ್ಮ ಗ್ರಾಹಕರೇ ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ಪಾಲುದಾರರಾದ ಸಂತೋಷ್ ವಾಗ್ಲೆ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಗ್ರಾಹಕರು ಈ ಹಿಂದಿನಂತೆ ನಮ್ಮ ಸಂಸ್ಥೆಗೆ ನೀಡಿದ ಪ್ರೋತ್ಸಾಹದಂತೆ ಮುಂದೆಯೂ ನಮಗೆ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ನಾಯಕ್, ಲಕ್ಷ್ಮಣ್ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಉಪಸ್ಥಿತರಿದ್ದರು.