ಉದ್ಯಾವರ: “ಲಲಿತ್ ರೆಸಿಡೆನ್ಸಿ‌” ಶುಭಾರಂಭ

ಉಡುಪಿ, ಅ.06 (ಉಡುಪಿ ಟೈಮ್ಸ್ ವರದಿ): ಉದ್ಯಾವರ ಬಲೈಪಾದೆಯಲ್ಲಿ ನೂತನವಾಗಿ ನಿರ್ಮಿಸಿದ “ಲಲಿತ್ ರೆಸಿಡೆನ್ಸಿ‌“ಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಇಂದು ಉದ್ಘಾಟಿಸಿದರು. 

ನೂತನ ಈ ರೆಸಿಡೆನ್ಸಿಯಲ್ಲಿ ಹತ್ತು ವಸತಿ ಗೃಹ ಹಾಗೂ 250 ಜನರಿಗಾಗುವಷ್ಟು ಪಾರ್ಟಿ ಹಾಲ್‌ ವ್ಯವಸ್ಥೆ ಮಾಡಲಾಗಿದೆ.

ಅದೇ ಹೊಟೇಲ್ ಫಿಶ್ ಪಾಯಿಂಟ್‌ನಲ್ಲಿ ಶುಚಿ ರುಚಿಯಾದ ವೆಜ್ ಮತ್ತು ನಾನ್‌ವೆಜ್ ಖಾದ್ಯಗಳು ಅ.09 ರಿಂದ ಗ್ರಾಹಕರಿಗೆ ಸಿಗಲಿದೆ.

ಈ ಸಂದರ್ಭದಲ್ಲಿ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಪ್ರವರ್ತಕರಾದ ಅಲೆವೂರು ದಿನೇಶ್ ಕಿಣಿ, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್ ಸಂಪಿಗೆನಗರ, ಹರೀಶ್ ಶೆಟ್ಟಿ, ಮಾಲಕರಾದ ಚಿದಾನಂದ ಕೋಟ್ಯಾನ್ ಕೊರಂಗ್ರಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!