ಕಲ್ಯಾಣಪುರ: ತಡರಾತ್ರಿವರೆಗೆ ಧ್ವನಿವರ್ಧಕ ಬಳಕೆ- ಪ್ರಕರಣ ದಾಖಲು
ಮಲ್ಪೆ, ಅ.6: ಕಲ್ಯಾಣಪುರ ತೂಗು ಸೇತುವೆ ಬಳಿ ಮನೆಯೊಂದರಲ್ಲಿ ಅ.5ರಂದು ತಡರಾತ್ರಿವರೆಗೆ ಅತೀ ಕರ್ಕಶವಾದ ಸೌಂಡ್ ಹಾಕಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಮುಂದುಗಡೆ ಜಾಗದಲ್ಲಿ ದೇವಿಪ್ರಸಾದ್ ಎಂಬಾತ ತನ್ನ ಸ್ನೇಹಿತ ರೊಡನೆ ಅತೀ ಕರ್ಕಶವಾದ ಸೌಂಡ್ ಹಾಕಿ ಕೊಂಡು ತನ್ನ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡು ಬಂದಿದ್ದು, ದಾಳಿ ನಡೆಸಿದ ಪೊಲೀಸರು 40,000ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.