ಉಡುಪಿ: ಎಸ್‌ಬಿಐ ಗೃಹ ಹಾಗೂ ಕಾರು ಸಾಲ ಹಬ್ಬ ಉದ್ಘಾಟನೆ

ಉಡುಪಿ: ನಗರದ ಅಜ್ಜರಕಾಡಿನ ಪುರಭವನದಲ್ಲಿ ಎಸ್‌ಬಿಐ ಗೃಹ ಹಾಗೂ ಕಾರು ಸಾಲ ಹಬ್ಬವನ್ನು ಉಡುಪಿಯ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು.

ಕಾರು ಲೋನ್ ಹಬ್ಬವನ್ನು ಹೀಲಿಯಂ ಬಲೂನು ಹಾರಿಸುವ ಮೂಲಕ ಹಾಗೂ ಗೃಹ ಸಾಲ ಹಬ್ಬವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಲ್ಲೇ ಗೃಹ ಸಾಲ ಮಂಜೂರು ಮಾಡುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಸಾಲ ಒದಗಿಸುವ ಎಸ್‌ಬಿಐನ ಈ 2 ದಿನದ ಸಾಲ ಹಬ್ಬದ ಪ್ರಯೋಜನವನ್ನು ಹೆಚ್ಚಿನ ಗ್ರಾಹಕರು
ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅರ್ಚನಾ ಪ್ರೊಜೆಕ್ಟ್‌ನ ಅಮಿತ್ ಅರವಿಂದ ನಾಯಕ್, ಗ್ರಾಸ್‌ಲ್ಯಾಂಡ್ಸ್ ಡೆವಲರ‍್ಸ್ನ ಅರ್ನವ್ ಅಮೀನ್, ಕಲ್ಕೂರ ಬಿಲ್ಡ್ರಸ್ &
ಡೆವಲಪರ್ ರಂಜನ್ ಕಲ್ಕುರ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಐ
ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಕಛೇರಿಯ ಮುಖ್ಯ ವ್ಯವಸ್ಥಾಪಕರಾದ ಕೃಷ್ಣರಾಜ್ ಕೆ.ಭಟ್ ಎಲ್ಲರನ್ನು ಸ್ವಾಗತಿಸುತ್ತಾ ಮಾತನಾಡಿ, ಗ್ರಾಹಕರು ಹಾಗೂ ಬ್ಯಾಂಕ್ ಎಲ್ಲರೂ ಬೆಳೆಯಬೇಕು, ನಿರ್ಮಾಣ ಕ್ಷೇತ್ರದ ಪ್ರತಿನಿಧಿಗಳು ಬ್ಯಾಂಕ್‌ಗಳೊಂದಿಗೆ ಸಾಲ ಪಡೆದು ಜೊತೆಯಾಗಿ ಪ್ರಯೋಜನ ಪಡೆಯಬೇಕು ಹಾಗೂ ಎಸ್‌ಬಿಐಯ ಸಾಲ ಯೋಜನೆಗಳು, ಗ್ರಾಹಕಸ್ನೇಹಿ ಸೇವೆ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಮಾತನಾಡಿದರು. ಸುಪ್ರೀಯಾ ವಂದಿಸಿದರು.

ಅಮೃತ ಹಾಗೂ ಮೀರಾ ಕಾರ್ಯಕ್ರಮ ನಿರ್ವಹಿಸಿದರು. 2 ದಿನಗಳ ಈ ಹಬ್ಬವು ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಎಸ್‌ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!