ದಸರಾ ಪ್ರಯುಕ್ತ ಯಶವಂತಪುರ- ಕಾರವಾರ – ಮೈಸೂರು ಜಂಕ್ಷನ್ ನಡುವೆ ಎಕ್ಸ್‌ಪ್ರೆಸ್ ರೈಲು
ಉಡುಪಿ, ಅ.4: ದಸರಾ ಮಹೋತ್ಸವದ ಪ್ರಯಾಣಿಕರ ನೂಕುನುಗ್ಗಲನ್ನು ನಿಭಾಯಿಸುವುದಕ್ಕಾಗಿ ಅ.11, 1,2, 13ರಂದು ಯಶವಂತಪುರ, ಕಾರವಾರ ಹಾಗೂ ಮೈಸೂರು ಜಂಕ್ಷನ್‌ಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ನಂ.06569 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.11ರಂದು ಮಧ್ಯರಾತ್ರಿ 12:30ಕ್ಕೆ ಯಶವಂತಪುರದಿಂದ ಹೊರಟು ಅದೇ ದಿನ ಸಂಜೆ 4:15ಕ್ಕೆ ಕಾರವಾರ ತಲುಪಲಿದೆ. ರೈಲು ನಂ. 06570 ಕಾರವಾರ -ಮೈಸೂರು ಜಂಕ್ಷನ್ ಎಕ್ಸ್‌ಪ್ರೆಸ್ ಕಾರವಾರದಿಂದ ಅ.11ರಂದು ರಾತ್ರಿ 11:30ಕ್ಕೆ ಹೊರಟು ಅ.12ರಂದು ಸಂಜೆ 4:40ಕ್ಕೆ ಮೈಸೂರು ಜಂಕ್ಷನ್ ತಲುಪಲಿದೆ.
ಮೊದಲ ರೈಲಿಗೆ ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಹಾಗೂ ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ನಿಲ್ದಾಣಗಳಲ್ಲದೇ ರೈಲು ನಂ.06570 ಯಶವಂತಪುರ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆಯ ನ್ನು ಹೊಂದಿರಲಿದೆ. ಈ ರೈಲುಗಳಲ್ಲಿ 2ಟಯರ್ ಎಸಿ ಎರಡು ಕೋಚ್, 3ಟಯರ್ ಎಸಿ 2 ಕೋಚ್, 6 ಸ್ಲೀಪರ್ ಕೋಚ್, 6 ಜನರಲ್ ಕೋಚ್ ಸೇರಿದಂತೆ ಒಟ್ಟು 18 ಕೋಚ್‌ಗಳನ್ನು ಹೊಂದಿರುತ್ತದೆ.
ರೈಲು ನಂ.06585 ಮೈಸೂರು-ಕಾರವಾರ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಅ.12ರಂದು ರಾತ್ರಿ 9:20ಕ್ಕೆ ಮೈಸೂರಿನಿಂದ ಹೊರಡಲಿದ್ದು, ಮರುದಿನ ಸಂಜೆ 4:15ಕ್ಕೆ ಕಾರವಾರ ತಲುಪಲಿದೆ. ರೈಲು ನಂ.06586 ಕಾರವಾರ- ಮೈಸೂರು ಜಂಕ್ಷನ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಅ.13ರಂದು ರಾತ್ರಿ 11:30ಕ್ಕೆ ಕಾರವಾರದಿಂದ ಹೊರಡಲಿದ್ದು, ಅ.14ರಂದು ಸಂಜೆ 4:40ಕ್ಕೆ ಮೈಸೂರು ಜಂಕ್ಷನ್ ತಲುಪಲಿದೆ.
ಈ ರೈಲಿಗೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್, ಯಶವಂತಪುರ, ಕುಣಿಗಲ್, ಚೆನ್ನರಾಯ ಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಹಾಗೂ ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು 2ಟಯರ್ ಎಸಿ ಎರಡು ಕೋಚ್, 3ಟಯರ್ ಎಸಿ 2 ಕೋಚ್, 6 ಸ್ಲೀಪರ್ ಕೋಚ್, 6 ಜನರಲ್ ಕೋಚ್ ಸೇರಿದಂತೆ ಒಟ್ಟು 18 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಕುರಿತು ಹೆಚ್ಚಿನ ವಿವರ ಹಾಗೂ ರೈಲುಗಳ ಸಮಯದ ಕುರಿತಂತೆ ಮಾಹಿತಿಗಾಗಿ -www.enquiry. indianrail.gov.in – ವೆಬ್‌ಸೈಟ್‌ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.