ಉಡುಪಿ: ಅ.5-6 ರಂದು ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬ
ಉಡುಪಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿ ಹಂತದಲ್ಲೂ ವಿನೂತನ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದೆ. ಜನರಿಗೆ ಆರ್ಥಿಕವಾಗಿ ಸಹಕಾರಿಯಾಗಿರುವ ಬ್ಯಾಂಕ್ ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ತನ್ನ ವಿಭಿನ್ನ ಗ್ರಾಹಕ ಸ್ನೇಹಿ ಸಾಲ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಲು ಅನೇಕ ವಿನೂತನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿಯೂ ಸದಾ ಮುಂದಿದೆ.
ಎಸ್‌ಬಿಐ ಇದೀಗ ಉಡುಪಿ ಜನರ ಸ್ವಂತ ಮನೆ ಖರೀದಿಸುವ ಕನಸನ್ನು ನನಸಾಗಿಸಲು ಅತ್ಯುತ್ತಮವಾದ ಮನೆಯನ್ನು ಹಾಗೂ ಕಾರು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಕನಿಷ್ಟ ಬಡ್ಡಿ ದರದಲ್ಲಿ ತ್ವರಿತವಾಗಿ ಗೃಹ ಹಾಗೂ ಕಾರು ಸಾಲ ಹಬ್ಬದಲ್ಲಿ ಪಡೆಯಲು ಅತ್ಯುತ್ತಮ ಅವಕಾಶವೊಂದನ್ನು ರೂಪಿಸಿದೆ.
ಗೃಹ ಮತ್ತು ಕಾರು ಸಾಲ ಹಬ್ಬ – ಪ್ರವೇಶ ಉಚಿತ
ಅಕ್ಟೋಬರ್ 05 ಶನಿವಾರ ಮತ್ತು 06ರ ರವಿವಾರ ಉಡುಪಿಯ ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಗೃಹ ಹಾಗೂ ಕಾರು ಸಾಲ ಹಬ್ಬವನ್ನು ಆಯೋಜಿಸುತ್ತಿದೆ. ನವರಾತ್ರಿ ಋತುವಿನಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಗರದ ಪ್ರಮುಖ ಬಿಲ್ರ‍್ಸ್ ಹಾಗೂ ಕಾರು ಡೀರ‍್ಸ್ಗಳು ಭಾಗವಹಿಸಲಿದ್ದು, ಸೌಲಭ್ಯಗಳನ್ನು ಹೋಲಿಕೆ ಮಾಡಿ ಉತ್ತಮ ಆಯ್ಕೆಯ ಸದವಕಾಶವನ್ನು ಈ ಮೇಳದಲ್ಲಿ ಒದಗಿಸಲಾಗಿದೆ.
ಗೃಹ ಸಾಲಕ್ಕಾಗಿ ಸ್ಪಾಟ್ ಬುಕ್ಕಿಂಗ್ ಮೇಲೆ ವಿಶೇಷ ರಿಯಾಯಿತಿ ಬಡ್ಡಿದರ
ಕಾರ್ ಲೋನ್‌ಗಾಗಿ ಆಕರ್ಷಕ ಬಡ್ಡಿದರ
ಪೂರ್ವಪಾವತಿ/ ಅವಧಿಪೂರ್ವ ಪಾವತಿ ದಂಡವಿಲ್ಲ
ಸೋಲಾರ್ ರೂಫ್‌ಟಾಪ್‌ಗೆ ಹಣಕಾಸು ನೆರವು
ತ್ವರಿತ ಮಂಜೂರಾತಿ
12+ ಅನುಮೋದಿತ ಯೋಜನೆಗಳು
ಮಹಿಳಾ ಉದ್ಯೋಗಿಗಳಿಗೆ ವಿಶೇಷ ಕೊಡುಗೆ
ನಂಬಿಕೆ ಮತ್ತು ಪಾರದರ್ಶಕತೆ
ಶೂನ್ಯ ಸಂಸ್ಕರಣಾ ಶುಲ್ಕ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ
ವಿಶೇಷ ಗೃಹ ಸಾಲ ಕೇಂದ್ರಗಳು
ಪ್ರತಿ ಗಂಟೆಗೆ ಲಕ್ಕಿ ಡ್ರಾಗಳಲ್ಲಿ ವಿಶೇಷ ಬಹುಮಾನಗಳು
ನಿಮ್ಮ ಆಯ್ಕೆಯ ನಿರ್ಧಾರಕ್ಕೆ ಆನ್‌ಸ್ಪಾಟ್ ಬುಕ್ಕಿಂಗ್ ಮೇಲೆ ವಿಶೇಷ ರಿಯಾಯಿತಿ ಬಡ್ಡಿದರ, ಹಾಗೂ ಇತರ ಸೌಲಭ್ಯಗಳೊಂದಿಗೆ ನಿಮ್ಮ ಕನಸಿನ ಸಾಕಾರಕ್ಕೆ ಎಸ್‌ಬಿಐ ನೆರವಾಗಲಿದೆ. ಅದಲ್ಲದೇ ನೂತನ ಕಾರು ಖರೀದಿಗಾಗಿ ಶೋರೂಂ ಅಲೆಯುವ ಬದಲಾಗಿ ಈ ವಿಶೇಷ ಮೇಳಕ್ಕೆ ಆಗಮಿಸಿ ವಿವಿಧ ಕಂಪನಿಗಳ ವಿವಿಧ ಮಾಡೆಲ್ ಕಾರುಗಳನ್ನು ಒಂದೇ ಸ್ಥಳದಲ್ಲಿ ಹೋಲಿಕೆ ಮಾಡಿಕೊಳ್ಳುವ ಹಾಗೂ ಜೊತೆಗೆ ಎಸ್‌ಬಿಐ ಒದಗಿಸುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯದ ಲಾಭ ಪಡೆದುಕೊಂಡು ನಿಮ್ಮ ನೆಚ್ಚಿನ ಕಾರನ್ನು ಖರೀದಿಸುವ ಅವಕಾಶವನ್ನು ಸಹ ಕಲ್ಪಿಸಲಾಗಿದೆ.
ಈ ಹಬ್ಬದಲ್ಲಿ ಗೃಹ ಸಾಲದ ಜೊತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‌ಎಮ್‌ಇ ಸಾಲ, ವೈಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳ ಬಗೆಗೆ ಹಾಗೂ ಅವುಗಳನ್ನು ಪಡೆಯಲು ಇರುವ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ಹಾಗೂ ಸೇವೆ ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ ನಿಮ್ಮ ಬಹುಕಾಲದ ಕನಸನ್ನು ಇಲ್ಲಿ ನನಸಾಗಿಸಿ ಎಂದು ಎಸ್‌ಬಿಐ ಆರ್‌ಬಿಒ ಉಡುಪಿ ಇದರ ಪ್ರಾದೇಶಿಕ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್‌ಬಿಐ ಗೃಹ ಹಾಗೂ ಕಾರು ಸಾಲ ಹಬ್ಬಕ್ಕೆ ಬನ್ನಿ, ಎಲ್ಲರನ್ನು ಕರೆತನ್ನಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81971 64889