“ಕಾಮಿಡಿ ಚಾವಡಿ” ಅರ್ಹತಾ ಸುತ್ತಿಗಾಗಿ ಅ.15 ರೊಳಗೆ ಕುಂದಕನ್ನಡ ಕಾಮಿಡಿ ವಿಡಿಯೋ ಆಹ್ವಾನ
ಉಡುಪಿ, ಸೆ.30: “ಉಡುಪಿ ಟೈಮ್ಸ್”ನ ಅಂಗ ಸಂಸ್ಥೆ ‘ಪಬ್ಲಿಕ್ ಲೈನ್’ ವಾಹಿನಿಯು ಕುಂದ ಕನ್ನಡದ ಸ್ಟ್ಯಾಂಡ್ ಅಪ್ ಕಾಮಿಡಿ ರಿಯಾಲಿಟಿ ಶೋ “ಕಾಮಿಡಿ ಚಾವಡಿ” ಆಯೋಜಿಸಿದ್ದು, ನೀವು ನಿರರ್ಗಳವಾಗಿ ಕುಂದಗನ್ನಡದಲ್ಲಿ ನಗೆ ಚಟಾಕಿಗಳೊಂದಿಗೆ ಮಾತನಾಡಿದ 4 ನಿಮಿಷದ ನಿಮ್ಮ ನೆಚ್ಚಿನ ವಿಷಯದ ಕುರಿತಾದ ಒಂದೇ ಸ್ಥಳದಲ್ಲಿ ನಿಂತು ಮಾಡಿದ ಹಾಸ್ಯ ವಿಡಿಯೋ ತುಣುಕನ್ನು ಅರ್ಹತಾ ಸುತ್ತಿಗಾಗಿ 9980981080 ಅಕ್ಟೋಬರ್ 15 ರೊಳಗೆ ಕಳುಹಿಸಿ ಕೂಡಬೇಕಾಗಿ ಕೋರಲಾಗಿದೆ.
ಹಾಗೂ ವಿಜೇತರಿಗೆ ಪ್ರಥಮ ಬಹುಮಾನ ರೂ. 10,001 ಹಾಗೂ ಟ್ರೋಫಿ ದ್ವಿತೀಯ ಬಹುಮಾನ ರೂ. 7,001 ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. 5,001 ಹಾಗೂ ಟ್ರೋಫಿ ಘೋಷಿಸಲಾಗಿದೆ.
ಸ್ಪರ್ಧಾ ನಿಯಮಗಳು…..
ಕುಂದಗನ್ನಡ ಭಾಷೆಯ ಗ್ರಾಮೀಣ ಸೊಗಡು, ಸ್ಪಷ್ಟತೆ, ಶೈಲಿ ಇರುವಂತದ್ದು.
ಅಭಿನಯ ಪ್ರಾಧಾನ್ಯವಲ್ಲ.
ವಿಷಯ ಮಂಡನೆಗೆ ಆದ್ಯತೆ.
ಸೀಮಿತಾವಧಿಯಲ್ಲಿ ಬಳಸಿಕೊಳ್ಳುವ ಹಾಸ್ಯರಸ ಪರಿಗಣಿಸಲಾಗುವುದು.
ವಿಡಿಯೋ ಚಿತ್ರೀಕರಣದ ಪರಿಶುದ್ಧತೆ ಗಣನೆಗೆ ತೆಗದುಕೊಳ್ಳಲಾಗುವುದು.
ನಿಮ್ಮ ಮಾತು ಸ್ಪಷ್ಟವಾಗಿ ಕೇಳುವಂತಿರಬೇಕು.
ಯಾವುದೇ ಜಾತಿ, ಧರ್ಮ, ಪಕ್ಷ, ಸಂವಿಧಾನಕ್ಕೆ ನಿಂದನಾತ್ಮಕವಾಗಿರಬಾರದು.
ರಾಜ ಹಾಗೂ ನಾಗರೀಕ ಹಾಸ್ಯಗಳಿಗೆ ಆದ್ಯತೆ.
ಅಶ್ಲೀಲ ಹಾಗೂ ಅಸಭ್ಯ ಪದಗಳನ್ನು ಬಳಸುವಂತಿಲ್ಲ.
ತೀರ್ಪುಗಾರರ ತೀರ್ಮಾನವೇ ಅಂತಿಮ.
ವಿಜೇತ ಮೂರು ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು.