ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ ಎಂದು ಹೇಳುತ್ತಾ ವೇದಿಕೆ ಮೇಲೆ ಕುಸಿದು ಬಿದ್ದ ಖರ್ಗೆ!

Oplus_131072

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ಮಾಡುತ್ತೇವೆ. ನನಗೆ 83 ವರ್ಷ, ನಾನು ಅಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ ಎಂದು ಹೇಳಿದರು. ಅಲ್ಲದೆ ಭಾಷಣದ ವೇಳೆ ಖರ್ಗೆ ಅಸ್ವಸ್ಥರಾಗಿ ವೇದಿಗೆ ಮೇಲೆ ಕುಸಿದು ಬಿದ್ದರು.

ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡ ಖರ್ಗೆ, ಬಿಜೆಪಿಗರು ಎಂದಿಗೂ ಚುನಾವಣೆ ನಡೆಸಲು ಬಯಸುವುದಿಲ್ಲ. ಆದರೆ ಅವರು ಬಯಸಿದರೆ, ಅದನ್ನು ಒಂದು ಅಥವಾ ಎರಡು ವರ್ಷಗಳಲ್ಲಿ ಮಾಡಬಹುದಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಆರಂಭಿಸಿದರು. ಅವರು ಖಂಡಿತವಾಗಿಯೂ ಚುನಾವಣೆಯನ್ನು ಬಯಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಗರು ಲೆಫ್ಟಿನೆಂಟ್ ಗವರ್ನರ್ ಮೂಲಕ ರಿಮೋಟ್-ನಿಯಂತ್ರಿತ ಸರ್ಕಾರವನ್ನು ನಡೆಸಲು ಬಯಸಿದ್ದರು. ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಭಾರತದ ಯುವಕರಿಗೆ ಏನನ್ನೂ ನೀಡಿಲ್ಲ. 10 ವರ್ಷಗಳಲ್ಲಿ ನಿಮ್ಮ ಸಮೃದ್ಧಿಯನ್ನು ಮರಳಿ ತರಲು ಸಾಧ್ಯವಾಗದ ವ್ಯಕ್ತಿಯನ್ನು ನೀವು ನಂಬಬಹುದೇ? ಯಾವುದೇ ಬಿಜೆಪಿ ನಾಯಕರು ನಿಮ್ಮ ಮುಂದೆ ಬಂದರೆ, ಅವರು ಪ್ರಗತಿ ತಂದಿದ್ದಾರೋ ಇಲ್ಲವೋ ಕೇಳಿ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!