ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ BJP-JDS ಯಾವ ನಾಯಕರಿಗೂ ಇಲ್ಲ: ಸುರೇಶ್ ಶೆಟ್ಟಿ

ಉಡುಪಿ: ಭ್ರಷ್ಟಾಚಾರವೇ ತಮ್ಮ ಹಕ್ಕು ಎಂದು ತಿಳಿದು ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಷ್ಟು ಸಮಯ ಈ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಕರ್ನಾಟಕ ಸರಕಾರವನ್ನು ಸರ್ಕಾರದ ಖಜಾನೆ ಸಂಪೂರ್ಣವಾಗಿ ಲೂಟಿ ಮಾಡಿದಂತಹ ಇವರುಗಳಿಗೆ ನಮ್ಮ ನಿಷ್ಕಳಂಕ, ಬಡವರ ಪಾಲಿನ ಆಶಾ ಕಿರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕತೆ ಇದೆಯೇ..?

ಕೇಂದ್ರದ ಮೋದಿ ಸರಕಾರ ಚುನಾವಣೆ ಬಾಂಡ್ ಹೆಸರಲ್ಲಿ ಸಾವಿರಾರು ಕೋಟಿ ದೋಚಿದ್ದು ಸುಪ್ರೀಂಕೋರ್ಟಿನಿಂದ ಚೀಮಾರಿಗೊಂಡದ್ದು ನೆನಪಿಲ್ಲವೇ. ಅದು ಭ್ರಷ್ಟಾಚಾರ ಅಲ್ಲವೇ. ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ಸರಕಾರಿ ಬ್ಯಾಂಕುಗಳಲ್ಲಿ ಇದ್ದ ಸಾಲವನ್ನು ಮನ್ನಾ ಮಾಡಿರೋದು ಭ್ರಷ್ಟಾಚಾರ ಅಲ್ಲವೇ.‌.?

ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಈ ದೇಶದಲ್ಲಿ ಬೆಲೆ ಏರಿಕೆ ಜಾಸ್ತಿಯಾಗಿದ್ದು ಕಳೆದ 11 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನು ದೂಷಿಸಿಕೊಂಡೆ ಕಾಲ ಕಳೆದಿದ್ದಾರೆ. ಇದೀಗ ಮೋದಿ ನೇತೃತ್ವದ ಕೇಂದ್ರ ಸರಕಾರ ICU ನಲ್ಲಿ ಇದ್ದ ಹಾಗೆ ಇದೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಾ ಇಲ್ಲ. ಬಿಜೆಪಿ ಬೆಂಬಲಿತ ಪತ್ರಿಕಾ ಹಾಗೂ ಟಿವಿ ಮಾಧ್ಯಮದಲ್ಲಿ ಇವರು ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಬರುತ್ತಿದ್ದೇ ಹೊರತು ಅಭಿವೃದ್ಧಿ ಕಾರ್ಯಗಳು ಯಾವುದು ಆಗುತ್ತಾ ಇಲ್ಲ.

ಅಧಿಕಾರದ ಕುರ್ಚಿಗೆ ಅಂಟಿಕೊಂಡ ಮೋದಿ ಅವರು ಕೇವಲ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಿ ಅವರಿಗೆ ಕೇಂದ್ರದ ಕೊಡುಗೆಯನ್ನು ನೀಡುತ್ತಿದ್ದಾರೆ ಹೊರತು ಬೇರೆ ಎಲ್ಲ ರಾಜ್ಯಗಳಿಗೂ ಚೊಂಬು ನೀಡಿರುತ್ತಾರೆ. ಕೇಂದ್ರ ಸರಕಾರದ ಈ ನಡೆಯನ್ನು ಮರೆಮಾಚಲು ರಾಜ್ಯಪಾಲರ ಮುಖಾಂತರ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ.

ಅನಗತ್ಯವಾಗಿ ಸಿದ್ದರಾಮಯ್ಯ ನವರ ವಿರುದ್ಧ ಸುಳ್ಳು ಆಪಾದನೆ ಮಾಡಿ ಕರ್ನಾಟಕ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾನೆ ಆದರೆ ಕರ್ನಾಟಕ ರಾಜ್ಯದ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಹಾಗೂ ಕೇಂದ್ರ ಸರಕಾರದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಇದ್ದಾರೆ ಎಂಬುದನ್ನು ಈ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ನಾಯಕರು ತಿಳಿದುಕೊಂಡರೆ ಒಳಿತು.

ಕರ್ನಾಟಕ ರಾಜ್ಯವನ್ನು ಬಿಜೆಪಿ ಹಾಗೂ ಜೆಡಿಎಸ್ ಗೆ ಮಾರಾಟ ಮಾಡಿಲ್ಲ ಎಂಬುದನ್ನು ಅರಿತುಕೊಂಡರೆ ವಿರೋಧ ಪಕ್ಷ ನಾಯಕರಿಗೆ ಒಳಿತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!