ಬೆಳ್ಳಂಪಳ್ಳಿ ಪ್ರವೀಣ ಎನ್.ಅವರಿಗೆ ಪಿಎಚ್‌ಡಿ ಪದವಿ

Oplus_131072

ಉಡುಪಿ: ಪ್ರವೀಣ ಎನ್. ಬೆಳ್ಳಂಪಳ್ಳಿ ಅವರನ್ನು ಪ್ರಸಿದ್ಧ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS), ಮುಂಬೈಯಿಂದ ಪಿಎಚ್‌ಡಿ ಪದವಿ ನೀಡಿ ಗೌರವಿಸಲಾಗಿದೆ. ಅವರ ಮಹತ್ವದ ಮಹಾಪ್ರಬಂಧ “ಗ್ರಾಮೀಣ ಕುಟುಂಬಗಳಲ್ಲಿ ವಲಸೆ ಹೊರಟು ಹೋದವರ ಪ್ರಭಾವ ಮತ್ತು ಜೀವನೋಪಾಯ ಭದ್ರತೆ” ಎಂಬ ಶೀರ್ಷಿಕೆಯಡಿ, TISSನ ಸಹಾಯಕ ಪ್ರಾಧ್ಯಾಪಕಿ ಡಾ. ನೀಲಮ್ ಯಾದವ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ.

ಕುಕ್ಕಿಕಟ್ಟೆ ಬೆಳ್ಳಂಪಳ್ಳಿಯ ಕಂಬಳಮಜಲು ನಿವಾಸಿ ಮಹಾಬಲ ನಾಯ್ಕ್ ಮತ್ತು ನಳಿನಿ ದಂಪತಿಯ ಪುತ್ರ ಪ್ರವೀಣ್ ಅವರು ಪ್ರಸ್ತುತ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಸಂಶೋಧನೆ ಮತ್ತು ಬೋಧನಾ ಪರಿಣತಿಯೊಂದಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!